ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ ಯುಗಾದಿ ಹಬ್ಬದ ಪ್ರಯುಕ್ತ ತನ್ನ ಜನಪ್ರಿಯ ಸ್ಕೂಟರ್ ಮತ್ತು ಮೋಟಾರ್ ಸೈಕಲ್‌ಗಳ ಶ್ರೇಣಿಯ ಮೇಲೆ ವಿವಿಧ ಹಬ್ಬದ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.
ಈ ಹಬ್ಬದ ಋತುವಿನಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಯಮಹಾ ವಾಹನಗಳನ್ನು ಮನೆಗೆ ಕೊಂಡೊಯ್ಯುವುದನ್ನು ಸುಲಭಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕದಲ್ಲಿ ಯುಗಾದಿ ವಿಶೇಷ ಕೊಡುಗೆಗಳು: ಯಮಹಾ R15 ಸರಣಿಯ ಮೇಲೆ ರಿಯಾಯಿತಿ ಕೊಡುಗೆ: ಈ ಹಬ್ಬದ ಸಂದರ್ಭವನ್ನು 70ನೇ ವಾರ್ಷಿಕೋತ್ಸವದ ವಿಶೇಷ ಬೆಲೆಯೊಂದಿಗೆ ಆಚರಿಸಬಹುದು. ಆನ್ ರೋಡ್ ಬೆಲೆಯ ಮೇಲೆ Rs. 6,000 ವರೆಗೆ ಉಳಿತಾಯ ಮಾಡುವ ಮೂಲಕ ಈ ಆಕರ್ಷಕ ಸೂಪರ್ ಸ್ಪೋರ್ಟ್ ಬೈಕ್ ಅನ್ನು ಈಗ ಮತ್ತಷ್ಟು ಸುಲಭವಾಗಿ ನಿಮ್ಮದಾಗಿಸಿಕೊಳ್ಳಬಹುದು.
• ಯಮಹಾ ರೇಝಡ್ಆರ್ (RayZR) 125 Fi Hybrid ಮೇಲೆ ವಿಶೇಷ ಕೊಡುಗೆ: ಕ್ರೀಡಾ ವಿನ್ಯಾಸ ಮತ್ತು ಅಸಾಧಾರಣ ಮೌಲ್ಯವನ್ನು ಹೊಂದಿರುವ ಈ ಸ್ಕೂಟರ್ ಮೇಲೆ 70ನೇ ವಾರ್ಷಿಕೋತ್ಸವದ ವಿಶೇಷ ಬೆಲೆಯ ಜೊತೆಗೆ Rs. 7,000 ವರೆಗೆ ರಿಯಾಯಿತಿ ಪಡೆಯಿರಿ.
• ಯಮಹಾ Fascino 125 Fi Hybrid ಮೇಲೆ ಯುಗಾದಿ ಕೊಡುಗೆ: ಯಮಹಾದ ಸ್ಟೈಲಿಶ್ ಮತ್ತು ಇಂಧನ ದಕ್ಷತೆಯ ಈ ಸ್ಕೂಟರ್ ಅನ್ನು ಕೇವಲ Rs. 4,999* ರ ಆರಂಭಿಕ ಮುಂಗಡ ಪಾವತಿಯೊಂದಿಗೆ ಈ ಹಬ್ಬದ ಋತುವಿನಲ್ಲಿ ನಿಮ್ಮದಾಗಿಸಿಕೊಳ್ಳಿ.
• ಯಮಹಾ FZ-S Fi Hybrid ಮೇಲೆ ಕಡಿಮೆ ಇಎಂಐ ಯೋಜನೆ: ಕಾರ್ಯಕ್ಷಮತೆ ಮತ್ತು ದಕ್ಷತೆಯ ಸಮ್ಮಿಲನವಾದ ಯಮಹಾದ ಸುಧಾರಿತ ಹೈಬ್ರಿಡ್ ಮೋಟಾರ್ ಸೈಕಲ್ ಅನ್ನು ಕೇವಲ Rs. 7,999* ರ ಆರಂಭಿಕ ಮುಂಗಡ ಪಾವತಿಯೊಂದಿಗೆ ಮನೆಗೆ ಕೊಂಡೊಯ್ಯಿರಿ.

ಈ ವಿಶೇಷ ಯುಗಾದಿ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿವೆ. ಹಬ್ಬದ ಆನಂದದ ಜೊತೆಗೆ ಯಮಹಾದ ಕಾರ್ಯಕ್ಷಮತೆ, ಹೊಸತನ ಮತ್ತು ಸವಾರಿಯ ಖುಷಿಯನ್ನು ಕಂಡುಕೊಳ್ಳಲು ಇದು ಗ್ರಾಹಕರಿಗೆ ಸೂಕ್ತ ಸಮಯವಾಗಿದೆ.
ಯಮಹಾದ ವೈವಿಧ್ಯಮಯ ಉತ್ಪನ್ನ ಪೋರ್ಟ್ ಫೋಲಿಯೋದಲ್ಲಿ YZF-R15M (155 ಸಿಸಿ), YZF-R15 V4 (155 ಸಿಸಿ), YZF-R15S V3 (155 ಸಿಸಿ), MT-15 V2 (155 ಸಿಸಿ), ಯಮಹಾ XSR155 (155ಸಿಸಿ) ನಂತಹ ಪ್ರೀಮಿಯಂ ಮೋಟಾರ್ ಸೈಕಲ್ ಗಳು ಮತ್ತು FZ-S Fi ಹೈಬ್ರಿಡ್ (149 ಸಿಸಿ), FZ-S Fi (149 ಸಿಸಿ) ಮತ್ತು FZ-X (149 ಸಿಸಿ) ಒಳಗೊಂಡ FZ ಸರಣಿಗಳು ಸೇರಿವೆ.
ಹೆಚ್ಚುವರಿಯಾಗಿ, ಯಮಹಾ ಏರಾಕ್ಸ್ (Aerox) 155 ವರ್ಷನ್ S (155 ಸಿಸಿ), ಏರಾಕ್ಸ್ 155 (155ಸಿಸಿ), ಫ್ಯಾಸಿನೋ S 125 Fi ಹೈಬ್ರಿಡ್ (125ಸಿಸಿ), ಫ್ಯಾಸಿನೋ 125 Fi ಹೈಬ್ರಿಡ್ (125ಸಿಸಿ), ರೇಝಡ್ಆರ್ (RayZR) 125 Fi ಹೈಬ್ರಿಡ್ (125ಸಿಸಿ) ಮತ್ತು ರೇಝಡ್ಆರ್ ಸ್ಟ್ರೀಟ್ ರಾಲಿ 125 Fi ಹೈಬ್ರಿಡ್ (125ಸಿಸಿ) ಸೇರಿ ವಿವಿಧ ಶ್ರೇಣಿಯ ಸ್ಕೂಟರ್ ಗಳನ್ನು ನೀಡುತ್ತದೆ.

