ರಾಜಕೀಯ ಸುದ್ದಿ

ಲೋಕಸಭಾ ಸ್ಪೀಕರ್ ವಿರುದ್ಧದ ವಿಪಕ್ಷಗಳ ಅವಿಶ್ವಾಸಕ್ಕೆ ಸೋಲು

Share It

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದ್ದು, ಬಿರ್ಲಾ ಸ್ಫೀಕರ್ ಆಗಿ ಮುಂದುವರಿಯಲಿದ್ದಾರೆ.

ವಿಪಕ್ಷಗಳ ಸದಸ್ಯರಿಗೆ ಚರ್ಚೆಗೆ ಅವಕಾಶ ನೀಡದಿರುವುದು ಸೇರಿದಂತೆ ಅನೇಕ ವಿಷಯಗಳಲ್ಲಿ ಆಡಳಿತ ಪಕ್ಷದ ಏಜೆಂಟರAತೆ ವರ್ತನೆ ಮಾಡುತ್ತಾರೆ ಎಂಬ ಕಾರಣಕ್ಕೆ ಬಿರ್ಲಾ ವಿರುದ್ಧ ವಿಪಕ್ಷಗಳೆಲ್ಲ ಒಟ್ಟಾಗಿ ಅವಿಶ್ವಾಸ ಮಂಡನೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಇಂದು ಲೋಕಸಭೆಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.

ಈ ವೇಳೆ ಆಡಳಿತಾರೂಢ ಬಿಜೆಪಿ ಸೇರಿದಂತೆ ಮಿತ್ರಪಕ್ಷಗಳು ಬಿರ್ಲಾ ಅವರ ಪರ ನಿಂತಿದ್ದು, ಅವರ ವಿರುದ್ಧದ ಅವಿಶ್ವಾಸಕ್ಕೆ ಹಿನ್ನಡೆಯುಂಟಾಯಿತು. ಹೀಗಾಗಿ, ಓಂ ಬಿರ್ಲಾ ಅವರು ಲೋಕಸಭಾ ಸ್ಪೀಕರ್ ಆಗಿ ಮುಂದುವರಿಯಲಿದ್ದಾರೆ.


Share It

You cannot copy content of this page