ಸುದ್ದಿ

ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಇಸ್ರೇಲ್ ಅಧ್ಯಕ್ಷ ನೇತ್ಯಾನಾಹು: ಸಾವಿರಾರು ಜನರಿಂದ ಪ್ರತಿಭಟನೆ

Share It

ಟೆಲ್ ಅವೀವ್ : ಕೆಲ ದಿನಗಳಿಂದ ಇಸ್ರೇಲ್ ಅಧ್ಯಕ್ಷರ ಕುರಿತು ಊಹಾಪೋಹಗಳು ಹರಿದಾಡುತ್ತಿದ್ದು, ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಸಾವಿರಾರು ಜನ ಒಟ್ಟಿಗೆ ಸೇರಿ ಪ್ರತಿಭಟನೆ ನಡೆಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇರಾನ್ ಅಧ್ಯಕ್ಷರನ್ನು ಕೊಂದಿರುವುದಾಗಿ ಅಮೇರಿಕಾ ಹೇಳಿಕೊಂಡಿದೆ. ನೇತ್ಯಾನಾಹು ಕೂಡ ಇರಾನ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಕೆಲವರು ಊಹಾಪೋಹ ಹಬ್ಬಿಸಿದ್ದಾರೆ. ಹೀಗಾಗಿ, ದೇಶದ ಪ್ರಜೆಗಳು ಆತಂಕಕ್ಕೊಳಗಾಗಿದ್ದಾರೆ.

ನಾಲ್ಕು ದಿನಗಳ ಹಿಂದೆ ನೇತ್ಯಾನಾಹು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆಯಾಗಿದ್ದು, ಆ ವಿಡಿಯೋದಲ್ಲಿ ಅವರ ಬಲಗೈನಲ್ಲಿ ಆರು ಬೆರಳುಗಳಿರುವುದು ಪತ್ತೆಯಾಗಿದ್ದು, ಇದೊಂದು ಎಐ ವಿಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿತ್ತು. ಅನಂತರ ಬಿಡುಗಡೆಯಾದ ಮತ್ತೊಂದು ವಿಡಿಯೋದಲ್ಲಿ ಅದನ್ನು ಅಲ್ಲಗಳೆಯುವ ಪ್ರಯತ್ನ ನಡೆಸಿದ್ದರೂ, ಅದೂ ಕೂಡ ಎಐ ವಿಡಿಯೋ ಎಂಬುದು ಗೊತ್ತಾಗಿತ್ತು.

ಈ ಹಿನ್ನೆಲೆಯಲ್ಲಿ ಇಸ್ರೇಲ್‌ನ ಸಾವಿರಾರು ನಾಗರಿಕರು ಟೆಲ್ ಅಲೀವ್ ಪಟ್ಟಣದಲ್ಲಿ ಸೇರಿದ್ದು, ತಮ್ಮ ದೇಶದ ಅಧ್ಯಕ್ಷರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವ ವಿಷಯದಲ್ಲಿ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ. ದೇಶದ ಪ್ರಧಾನಿಯ ಅನುಪಸ್ಥಿತಿಯಿಂದ ದೇಶದ ಜನತೆ ಭಯಭೀತರಾಗಿದ್ದು, ಇದಕ್ಕೆ ಸ್ವತಃ ಪ್ರಧಾನಿ ಸ್ಪಷ್ಟನೆ ನೀಡಬೇಕು ಎಂದು ಇಸ್ರೇಲಿಗರು ಒತ್ತಾಯಿಸಿದ್ದಾರೆ.


Share It

You cannot copy content of this page