ಉಪಯುಕ್ತ ಸುದ್ದಿ

47 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಮತ್ತೊಂದು ಹಡಗು ಭಾರತಕ್ಕೆ

Share It

ಬೆಂಗಳೂರು: ಕೊಲ್ಲಿಯಲ್ಲಿನ ಯುದ್ಧದ ಪರಿಸ್ಥಿತಿಯ ನಡುವೆಯೂ 47 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಯನ್ನು ಹೊತ್ತ ಜಗ್ ವಸಂತ್ ಹಡಗು ಭಾರತಕ್ಕೆ ಆಗಮಿಸಿದೆ.

ಗುಜರಾತ್‌ನ ಜಮ್‌ನಗರದ ವಡಿನಾರ್ ಟರ್ಮಿನಲ್‌ಗೆ ಹಡಗು ಆಗಮಿಸಿದೆ ಎಂದು ದೀನದಯಾಳ್ ಪೋರ್ಟ್ ಅಥಾರಿಟಿ ಸ್ಪಷ್ಟಪಡಿಸಿದೆ. ಈ ಹಡಗು 47 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತುತಂದಿದೆ.

ಹರ್ಮಾಜ್ ಜಲಸಂಧಿಯಲ್ಲಿನ ಉಧ್ವಿಗ್ನತೆಯ ನಡುವೆ ಭಾರತ ಸರಕಾರ ನಡೆಸಿದ ಮಾತುಕತೆಯ ಫಲವಾಗಿ ಇರಾನ್ ಕೆಲವು ಹಡಗುಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಅದರ ಭಾಗವಾಗಿ ವಸಂತ್ ಹಡಗು ಭಾರತಕ್ಕೆ ಆಗಮಿಸಿದೆ.


Share It

You cannot copy content of this page