ಉಪಯುಕ್ತ ಸುದ್ದಿ

KSRTCಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2026

Share It

ನವದೆಹಲಿ: ನಿಗಮವು ತನ್ನ “ಪಾರದರ್ಶಕ ನೇಮಕಾತಿ ಮತ್ತು ಪರಿಣಾಮಕಾರಿ ತರಬೇತಿ ಕಾರ್ಯಕ್ರಮ”ಕ್ಕೆ ಪ್ರತಿಷ್ಠಿತ ಸ್ಕೋಚ್ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.

ನಿಗಮವು ಅರ್ಜಿ ಸಲ್ಲಿಕೆದಿಂದ ಆಯ್ಕೆ ಪ್ರಕ್ರಿಯೆಯವರೆಗೆ, ಘಟಕ ನಿಯೋಜನೆ ವರೆಗೆ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಏಕರೂಪತೆಯನ್ನು ಕಾಪಾಡಿಕೊಂಡು ಮೂಲಕ ಮಾನವ ಹಸ್ತಕ್ಷೇಪವನ್ನು ನಿಲ್ಲಿಸಲಾಗಿದೆ.

ತಂತ್ರಜ್ಞಾನ ಆಧಾರಿತ ನೇಮಕಾತಿ ವ್ಯವಸ್ಥೆ, ಸ್ವಯಂ ಚಾಲಿತ ಚಾಲನಾ ಪರೀಕ್ಷೆ, ಆನ್ಲೈನ್ ಪರೀಕ್ಷೆಗಳು, ದಾಖಲೆಗಳ ಡಿಜಿಟಲ್ ಪರಿಶೀಲನೆ, ವೆಬ್ ಕ್ಯಾಸ್ಟಿಂಗ್, ಅಟೋ ಜನರೇಟಡ್ ಅಂಕಪಟ್ಟಿ ನೀಡುವ ಮೂಲಕ 2000 ಚಾಲಕ‌/ ನಿರ್ವಾಹಕರು, 300 ತಾಂತ್ರಿಕ ಸಿಬ್ಬಂದಿಗಳು, 441 ಅನುಕಂಪ‌ ಆಧಾರದಲ್ಲಿ‌ ಹುದ್ದೆಗಳನ್ನು ನೇಮಕಾತಿ ಮಾಡಲಾಗಿದೆ. ಇದಲ್ಲದೆ, ಕಳೆದ ಆರು ತಿಂಗಳಲ್ಲಿ ಸುಮಾರು 12,000ಕ್ಕೂ ಹೆಚ್ಚು ಸಿಬ್ಬಂದಿಗೆ ಪರಿಣಾಮಕಾರಿ ತರಬೇತಿ ನೀಡಲಾಗಿದ್ದು, ನಿಗಮದ ಸಮಗ್ರ‌ ವಿಷಯ ನಿರೂಪಣೆಯಲ್ಲಿನ ಬದಲಾವಣೆಗೆ ಸಹಕಾರಿಯಾಗಿದೆ.

ದೆಹಲಿ ಮೂಲದ ಸ್ಕಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು, 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003 ರಿಂದ ಸ್ಕಾಚ್ ಪ್ರಶಸ್ತಿಯನ್ನು ದೇಶದ ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ, ಪಾರದರ್ಶಕ ನೀತಿ, ಯೋಜನೆ, ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿರುವ ಕೊಡುಗೆಗಳು ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡಲಾಗುತ್ತದೆ.

ಇಂದು, ಸ್ಕಾಚ್ ಸಂಸ್ಥೆಯು ದೆಹಲಿಯ, ಸಿಲ್ವರ್ ಓಕ್ ಹಾಲ್, ಇಂಡಿಯಾ ಹ್ಯಾಬಿಟೇಟ್ ಸೆಂಟರ್ ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಅಕ್ರಂ ಪಾಷ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಆರ್ ಟಿಸಿ ರವರು ಶ್ರೀ. ಸಮೀರ್ ಕೊಚ್ಚರ್‌,‌ಅಧ್ಯಕ್ಷರು ಸ್ಕಾಚ್ ಫೌಂಡೇಶನ್ , ಡಾ.ಗುರುಚರಣ್ ಧನ್ಜಾಲ್,‌ ಉಪಾಧ್ಯಕ್ಷರು, ಸ್ಕಾಚ್ ಗ್ರೂಪ್ ರವರಿಂದ ಸ್ವೀಕರಿಸಿದರು.


Share It

You cannot copy content of this page