ಸುದ್ದಿ

KSRTCಗೆ ಪ್ರತಿಷ್ಠಿತ World HRD Congress Award ನ Best in Training and Organisation Development ವರ್ಗದಲ್ಲಿ ಕೇರಳ ಲೀಡರ್ ಶಿಪ್ ಪ್ರಶಸ್ತಿ-2026

Share It

ಕೊಚ್ಚಿನ್: ನಿಗಮದಲ್ಲಿ ಹಮ್ಮಿಕೊಂಡಿರುವ ಉತ್ತಮ ತರಬೇತಿ ಕಾರ್ಯಕ್ರಮಗಳಿಗೆ Best in Training and Organisation Development ವರ್ಗದಲ್ಲಿ ಕೆಎಸ್ ಆರ್ ಟಿ ಸಿ  ವ್ಯಾಪ್ತಿಯ 5 ತರಬೇತಿ ಕೇಂದ್ರಗಳಲ್ಲಿ ವಿವಿಧ ಮಾದರಿ ತರಬೇತಿ ಕಾರ್ಯಕ್ರಮಗಳನ್ನು (ಇಂಧನ ಕ್ಷಮತೆ, ಪುನಃಶ್ಚೇತನ, ಅಪಘಾತ ರಹಿತ ಚಾಲನಾ ತರಬೇತಿ, ರಸ್ತೆ ಸುರಕ್ಷತೆ, ಸಿಮ್ಯುಲೇಟರ್,  ಪಿ.ಎಂ.ಅಜಯ್ ಯೋಜನೆ ಅಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಭಾರಿ ವಾಹನದ ತರಬೇತಿಯೊಂದಿಗೆ ಸಾರಿಗೆ ಇಲಾಖೆ ಸಹಯೋಗದೊಂದಿಗೆ ಉಚಿತ ಚಾಲನಾ ಪರವಾನಗಿ ವಿತರಣೆ, ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದೊಂದಿಗೆ ಅಲ್ಪ ಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಲಘು/ಭಾರಿ ವಾಹನ ಚಾಲನಾ ತರಬೇತಿ ಉಚಿತ ಚಾಲನಾ ಪರವಾನಗಿ ವಿತರಣೆ, ಖಾಸಗಿ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ, ಹೊಸದಾಗಿ ಆಯ್ಕೆಗೊಂಡ ಚಾಲಕ-ಕಂ-ನಿರ್ವಾಹಕರಿಗೆ, ಕರಾಸಾ ಪೇದೆಗಳಿಗೆ, ಕಿರಿಯ ಸಹಾಯಕರುಗಳಿಗೆ ವೃತ್ತಿ ಪರಿಚಯ ಹಾಗು ಕರ್ತವ್ಯ ಮತ್ತು ಜವಾಬ್ದಾರಿ ತರಬೇತಿ, ಮೇಲ್ವಿಚಾರಕ ಸಿಬ್ಬಂದಿಗಳಿಗೆ ವಿಶೇಷ ತರಬೇತಿ, ಚಾಲಕ ಬೋಧಕರನ್ನು ಘಟಕಗಳಿಗೆ ನಿಯೋಜಿಸಿ ಚಾಲನಾ ಸಿಬ್ಬಂದಿಗಳಿಗೆ ತರಬೇತಿ, ಆಡಳಿತ ಸಿಬ್ಬಂದಿಗೆ ಪುನಃಶ್ಚೇತನ ತರಬೇತಿ ಮತ್ತು ಇತರೆ ತರಬೇತಿ) ಹೀಗೆ 12,000 ಕ್ಕೂ ಹೆಚ್ಚು ಸಿಬ್ಬಂದಿಗೆ ಕಳೆದ 6 ತಿಂಗಳ ಅವಧಿಯಲ್ಲಿ ನಿಗಮದ ಅಭಿವೃದ್ಧಿಯಲ್ಲಿನ‌ ಪರಿಣಾಮಕಾರಿ ತರಬೇತಿ ಸೂಚ್ಯಂಕವನ್ನು  ಪರಿಗಣಿಸಿ ಪ್ರತಿಷ್ಠಿತ World HRD Congress Award-2026 Best in Class Training and Development ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ. 

ಕೊಚ್ಚಿನ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ಯಾಪ್ಟನ್ ಎಸ್ .ಟಿ ಶ್ರೀಧರನ್ ನಿರ್ದೇಶಕರು, College of Ship Technology, ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಡಾ. ಲತಾ ಟಿ. ಎಸ್. ಮಂಡಳಿ ಕಾರ್ಯದರ್ಶಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ  ಎ. ಎಸ್. ಗೀತಾಂಜಲಿ, ಪ್ರಾಂಶುಪಾಲರು, ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ ನಿಗಮದ ಪರ ಪ್ರಶಸ್ತಿ ಸ್ವೀಕರಿಸಿದರು.


Share It

You cannot copy content of this page