ಜಿಲ್ಲೆ

ಬೆಳಗಾವಿ : ಇಲ್ಲಿಯ ಯಡಿಯೂರಪ್ಪ ಮಾರ್ಗದ ಬಳಿಯ ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ಮಂಗಳವಾರ ನಿಂತಿದ್ದ ಲಾರಿಗೆ ಕೋಳಿ

Share It

ಸಾಗಾಣಿಕೆ ಮಾಡುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ನೂರಾರು ಕೋಳಿಗಳು ಸಹ ಮೃತಪಟ್ಟಿವೆ. ವಾಹನದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ದುರ್ಘಟನೆಯಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಕ್ಕಪೇಟೆ ನಿವಾಸಿ ವಾಸೀಮ್(28), ಮುಬಾರಕ್ (22) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶಿಕಾರಿಪುರ ತಾಲೂಕಿನ ಮುಗಳಿಕೊಪ್ಪ ಗ್ರಾಮದ ವಾಹನ ಚಾಲಕ ಬಸವರಾಜ ಹಂಚಿನಮನಿ (37) ಗಂಭೀರ ಗಾಯವಾಗಿ ಗಾಯಗೊಂಡಿದ್ದಾರೆ.

ಅಪಘಾತದ ರಭಸಕ್ಕೆ ಚಾಲಕನ ಪಕ್ಕದಲ್ಲಿದ್ದ ಇಬ್ಬರು ದಾರುಣ ಸಾವು ಸಂಭವಿಸಿದೆ. ಚಾಲಕನ ಸ್ಥಿತಿ ಗಂಭೀರವಾಗಿದೆ. ಮಂಗಳವಾರ ಬೆಳಗಿನಜಾವ ನಿದ್ರೆಯ ಮಂಪರಿನಲ್ಲಿ ನಿಯಂತ್ರಣ ತಪ್ಪಿದ ವಾಹನ ಡಿಕ್ಕಿ ಹೊಡೆದು ಈ ಅನಾಹುತ ಸಂಭವಿಸಿದೆ.


Share It

You cannot copy content of this page