ಸಿನಿಮಾ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸು ಫ್ರಮ್​ ಸೋ’ ನಟ-ನಿರ್ದೇಶಕ ಜೆ.ಪಿ ತುಮಿನಾಡು

Share It

‘ಸು ಫ್ರಮ್ ಸೋ’. ವಿಷಯ ಮುಖ್ಯ ಎಂದು ಸಾಬೀತುಪಡಿಸಿದ ಚಿತ್ರ. ಕಥೆಯೇ ನಾಯಕ ಎಂದು ಒತ್ತಿ ಹೇಳಿದ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಚಿತ್ರ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡು 2025 ರಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಂಡ ನಟ-ನಿರ್ದೇಶಕ ಜೆ.ಪಿ. ತುಮಿನಾಡು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟ, ನಿರ್ದೇಶಕ ಮತ್ತು ಬರಹಗಾರರಾಗಿ ಹೆಸರು ಮಾಡಿರುವ ಜೆ.ಪಿ. ತುಮಿನಾಡು ಅವರು ರಶ್ಮಿಕಾ ಅವರೊಂದಿಗೆ ದಾಂಪತ್ಯದ ಹೊಸ್ತಿಲನ್ನು ದಾಟಿದ್ದಾರೆ. ಇಂದು, ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ.


Share It

You cannot copy content of this page