ಅಪರಾಧ

1.25 ಕೋಟಿ ಮೌಲ್ಯದ 250 ಕೆಜಿ ಗಾಂಜಾ ವಶ:ಇಬ್ಬರ ಬಂಧನ

Share It

ಆನೇಕಲ್: ಜಿಗಣಿ ಪೊಲೀಸರು 1 ಕೋಟಿ 25 ಲಕ್ಷ ಮೌಲ್ಯದ 250 ಕೆಜಿ ಗಾಂಜಾ ವಶಪಡಿಸಿಕೊಂಡು ಭರ್ಜರಿ ಬೇಟೆ ನಡೆಸಿದ್ದಾರೆ. ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಬಿಹಾರದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ರಾಮಾಯಣ ಯಾದವ್ (56) ಮತ್ತು ಸಬೀರ್ (51) ಅವರನ್ನು ಬಂಧಿಸಲಾಗಿದೆ. ಯಾರಿಗೂ ತಿಳಿಯದಂತೆ ದುಷ್ಕರ್ಮಿಗಳು ಒಡಿಶಾದಿಂದ ಕೋಳಿ ಸಾಕಾಣಿಕೆ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದರು. ಈ ಸಮಯದಲ್ಲಿ, ಜಿಗಣಿ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಬೇಗೂರು ಮುಖ್ಯ ರಸ್ತೆಯ ಕೊಪ್ಪ ಬಳಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದೆ. ಪ್ರಮುಖ ಆರೋಪಿ ಬಿನೋದ್ ಸಿಂಗ್ ಮತ್ತು ಬಾಬುಗಾಗಿ ಹುಡುಕಾಟ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಎಸ್‌ಪಿ ಚಂದ್ರಕಾಂತ್ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.


Share It

You cannot copy content of this page