ರಾಜಕೀಯ ಸುದ್ದಿ

ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ವರ್ಸಸ್ ಉದಯನಿಧಿ

Share It

ಬೆಂಗಳೂರು: ತಮಿಳು ನಾಡು ವಿಧಾನಸಭೆಯಲ್ಲಿ ಚಿತ್ರರಂಗದ ಇಬ್ಬರು ಎದುರುಬದುರಾಗಲಿದ್ದು, ಸಿಎಂ ವಿಜಯ್ ಅವರಿಗೆ ಪ್ರತಿಪಕ್ಷ ನಾಯಕನಾಗಿ ಉದಯನಿಧಿ ಸ್ಟಾಲಿನ್ ಆಯ್ಕೆಯಾಗಿದ್ದಾರೆ.

ಡಿಎಂಕೆ ಎರಡನೇ ಅತಿದೊಡ್ಡ ಪಕ್ಷವಾಗಿದ್ದು, ಅಂತಿಮವಾಗಿ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಂಡಿದೆ. ಸ್ಟಾಲಿನ್ ಬದಲಿಗೆ ಅವರ ಮಗ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಉದಯನಿಧಿ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಟಿವಿಕೆಯ ಮೂಲಕ ನಟ ದಳಪತಿ ವಿಜಯ್ ಸಿಎಂ ಆಗಿದ್ದರೆ, ಅದೇ ಚಿತ್ರರಂಗದ ಮತ್ತೊಬ್ಬ ನಟ ಹಾಗೂ ಸ್ಟಾಲಿನ್ ಪುತ್ರ ಉದಯನಿಧಿ ಪ್ರತಿಪಕ್ಷನಾಯಕನಾಗಿರಲಿದ್ದಾರೆ. ಇನ್ಮುಂದೆ ತಮಿಳುನಾಡು ವಿಧಾನಸಭೆಯಲ್ಲಿ ಎರಡು ನಟರ ಕಾದಾಟ ನೋಡಲು ಸಿಗಲಿದೆ.


Share It

You cannot copy content of this page