ರಾಜಕೀಯ ಸುದ್ದಿ

ಗ್ರಾಹಕರಿಗೆ ಮತ್ತೊಂದು ಶಾಕ್ : ಪೆಟ್ರೋಲ್, ಡೀಸೆಲ್​ ದರದಲ್ಲಿ ಮತ್ತೆ ಏರಿಕೆ: 10 ದಿನದಲ್ಲಿ ಮೂರನೇ ಬಾರಿ ಹೆಚ್ಚಳ

Share It

ನವದೆಹಲಿ: ಜಾಗತಿಕ ತೈಲ ಬಿಕ್ಕಟ್ಟಿನಿಂದಾಗಿ ಇಂದು ಮತ್ತೆ ತೈಲ ದರ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್​ಗೆ 91 ಪೈಸೆ ಹೆಚ್ಚಿಸಲಾಗಿದೆ. ಈ ಮೂಲಕ 10 ದಿನಗಳಲ್ಲಿ ಮೂರನೇ ಬಾರಿಗೆ ದರ ಏರಿಕೆ ಮಾಡಿದಂತಾಗಿದೆ.

ಪರಷ್ಕೃತ ದರದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 87 ಪೈಸೆ ಏರಿಕೆಯಾಗಿ 99.51 ರೂ.ಗಳಿಗೆ ತಲುಪಿದರೆ, ಡೀಸೆಲ್ ಬೆಲೆ ಲೀಟರ್‌ಗೆ 91 ಪೈಸೆ ಹೆಚ್ಚಳವಾಗಿ 91.58 ರೂಗಳಿಂದ 92.49 ರೂ.ಗೆ ತಲುಪಿದೆ.

10 ದಿನದಲ್ಲಿ ಮೂರನೇ ಬಾರಿ ಏರಿಕೆ: ಇದು ಕಳೆದ 10 ದಿನದಲ್ಲಿ ಮೂರನೇ ಬಾರಿಗೆ ತೈಲ ಬೆಲೆ ಏರಿಕೆಯಾಗಿದೆ. ಮೇ 15 ರಂದು ತೈಲ ಬೆಲೆಯಲ್ಲಿ 3 ರೂ. ಹೆಚ್ಚಾಗಿತ್ತು. ಬಳಿಕ ಮೇ 19 ರಂದು 90 ಪೈಸೆಯಷ್ಟು ಏರಿಸಲಾಗಿತ್ತು. ಇದೀಗ ಮತ್ತೆ 91 ಪೈಸೆ ಹೆಚ್ಚಿಸಲಾಗಿದೆ. ಈ ಮೂಲಕ ಎರಡು ವಾರಗಳಲ್ಲಿ ಪ್ರತಿ ಲೀಟರ್​ಗೆ 5 ರೂವರೆಗೆ ಹೆಚ್ಚಳವಾಗಿದೆ. ಒಟ್ಟಾರೆ 5 ರೂಪಾಯಿಗಳ ಏರಿಕೆ ಕಂಡು ಬಂದಿದೆ.


Share It

You cannot copy content of this page