ರಾಜಕೀಯ ಸುದ್ದಿ

ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ರಾಜಕೀಯ ರಂಗಕ್ಕೆ ಎಂಟ್ರಿ: ಜೆಡಿಎಸ್ ಸೇರ್ಪಡೆ ವೇಳೆಯ ಮದುಮಗಳ ವಿಡಿಯೋ ವೈರಲ್

Share It

ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿರುವ ನಟಿ ಮತ್ತು ನಿರೂಪಕಿ ಜಾಹ್ನವಿ ಅವರು ಇದೀಗ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಈ ಸಂದರ್ಭದಲ್ಲಿ ಅವರ ಒಂದು ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಜಾಹ್ನವಿ ಅವರ ಅಭಿಮಾನಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅವರಿಗೆ ಉತ್ತಮ ಅವಕಾಶಗಳೂ ಸಹ ದೊರೆಯುತ್ತಿವೆ. ಇದೀಗ ಅವರು ಮನರಂಜನಾ ಕ್ಷೇತ್ರವನ್ನು ದಾಟಿ ರಾಜಕೀಯದತ್ತ ಸಾಗಿದ್ದಾರೆ.

ನಿನ್ನೆಯಷ್ಟೇ ನಡೆದ ಕಾರ್ಯಕ್ರಮದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಅವರು ಪಕ್ಷ ಸೇರ್ಪಡೆಗೊಂಡರು. ಇದರ ಬೆನ್ನಲ್ಲೇ ಅವರು ಕೆಲವು ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಒಂದು ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅವರು ಮದುಮಗಳಂತೆ ಸಿಂಗರಿಸಿಕೊಂಡು ಮಿಂಚಿದ್ದಾರೆ.

ಜಾಹ್ನವಿ ಅವರ ಉಡುಗೆ-ತೊಡುಗೆ ಮತ್ತು ಮೇಕಪ್ ಶೈಲಿ ಯಾವಾಗಲೂ ಚರ್ಚೆಯಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಅವರು ತಮ್ಮ ಡ್ರೆಸ್ ಮತ್ತು ಮೇಕಪ್ಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದಾಗಿ ಬಹಿರಂಗಪಡಿಸಿದ್ದರು. ತಮಗೆ ಸಿಕ್ಕ ಸಂಭಾವನೆಗಿಂತ ತಾವು ಬಟ್ಟೆಗಾಗಿ ಮಾಡಿದ ಖರ್ಚೇ ಹೆಚ್ಚು ಎಂದು ಅವರು ಹೇಳಿಕೊಂಡಿದ್ದರು. ಅಲ್ಲದೆ, ತಮ್ಮ ಎರಡನೇ ಮದುವೆಯ ಬಗ್ಗೆ ಯಾವುದೇ ಯೋಚನೆ ಇಲ್ಲ ಮತ್ತು ತಮ್ಮ ಮಗನೇ ತಮ್ಮ ಪ್ರಪಂಚ ಎಂದು ಸ್ಪಷ್ಟಪಡಿಸಿದ್ದಾರೆ.


Share It

You cannot copy content of this page