ವರದಿ .ಮಹೇಶ ಹಕ್ಕರಕಿ
ಯುವ ಪೀಳಿಗೆಯೇ ಇ ದೇಶದ ಶಕ್ತಿ ಹಾಗಾಗಿ 18 ವರುಷ ತುಂಬಿದ ವಿಧ್ಯಾರ್ಥಿ.ವಿಧ್ಯಾರ್ಥಿನಿಯರು ಮತದಾರರ ಪಟ್ಟಿಯಲ್ಲಿ ತಮ್ಮ ಹೇಸರು ನೊಂದಾಯಿಸಿಕೋಳ್ಳಿ ಎಂದು ಪುರಸಭೆ ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ ಹೇಳಿದರು.
ಅಣ್ಣಿಗೇರಿ:ಜಿಲ್ಲಾಡಳಿತ.ಜಿಲ್ಲಾಪಂಚಾಯತ ಧಾರವಾಡ .ಜಿಲ್ಲಾ ಸ್ವಿಪ್ ಸಮಿತಿ. ಅಣ್ಣಿಗೇರಿ ಪುರಸಭೆ ಶ್ರೀ ಅಮೃತೇಶ್ವರ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಸಿಗೆ ನೀರೆರಿಸುವ ಮುಕಾಂತರ ಚಾಲನೆ ನೀಡಲಾಯಿತು.
ನಂತರ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳನ್ನು ಉದ್ದೇಶಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವೈ ಜಿ ಗದ್ದಿಗೌಡರ ಪ್ರಜಾಪ್ರಭುತ್ವ ಯಶಸ್ವಿಗೆ ಮತದಾರರು ಪಾತ್ರ ಅತ್ಯಂತ ಮಹತ್ವದಾಗಿದೆ 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ವಿಧ್ಯಾರ್ಥಿ&ವಿಧ್ಯಾರ್ಥಿನಿಯರು
ಅಹ೯ ನಾಗರಿಕರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು, ಹಾಗೂ ವಿದ್ಯಾರ್ಥಿಗಳು ತಮ್ಮ ಕುಟುಂಬದ ಸದಸ್ಯರಿಗೆ ಎಸ್ಐಆರ್ ಬಗ್ಗೆ ಗೊತ್ತಿಲ್ಲದವರಿಗೆ ತಿಳಿಹೇಳಬೇಕು,
ಭಾರತ ಸರ್ಕಾರ ಚುನಾವಣೆ ಆಯೋಗ ನಡೆಸುತ್ತಿರುವ ಮತದಾರರ
ಪರಿಷ್ಟರಣೆಯಲ್ಲಿ ಮನೆ ಮನೆಗೆ ಬಂದ ಅಧಿಕಾರಿಗಳಿಗೆ ಪಾಲಕರ ಜೊತೆಗೋಡಿಕೊಂಡು ಸಮಗ್ರ ಮಾಹಿತಿ ನೀಡಿ ಅಧಿಕಾರಿಗಳಿಗೆ ಹಾಗೂ ಬಿ ಎಲ್ ಎಲ್. ಜನರು ಸಹಕಾರ ಬಹಳ ಪ್ರಾಮುಖ್ಯವಾಗಿದೆ, ಅದಲ್ಲದೆ ವಿದ್ಯಾರ್ಥಿಗಳು ಭಾರತ ಸರ್ಕಾರ ನಡೆಸುತ್ತಿರುವ ಮತದಾರರ ಪಟ್ಟಿ ಪರಿಸ್ಕರಣಿಯಲ್ಲಿ 18 ವರ್ಷತುಂಬಿದ ಪ್ರತಿಯೋಬ್ಬ ವಿದ್ಯಾರ್ಥಿಗಳು ಪಟ್ಟಿಯಿಂದ ಹೋರಗುಳಿಯದಂತೆ ಪಟ್ಟಿಯಲ್ಲಿ ತಮ್ಮ ಹೇಸರನ್ನು ನೊಂದಾಯಿಸಿಕೋಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವೈ ಜಿ. ಗದ್ದಿಗೌಡರ, ಕಾರ್ಯಕ್ರಮಗಳ ಉಪನ್ಯಾಸಕ ಶಂಕರ ಶಿಶುನಹಳ್ಳಿ. ಕಾಲೇಜು ಪ್ರಾಚಾರ್ಯರಾದ ಎಂ ಆರ್ ಮುಂಡರಗಿ, ಡಾ. ಎಚ್. ಬಿ. ಪೂಜಾರ. ಪುರಸಭೆ ಸಿಬ್ಬಂದಿ ಐ ಎಂ ಪಠಾಣ, ರೂಪಾ ಕಮ್ಮಾರ್, ಅಶೋಕ, ಬೆಟಸೂರ, ಶಾಲಾ- ಕಾಲೇಜು ವಿದ್ಯಾರ್ಥಿ& ವಿದ್ಯಾರ್ಥಿನಿಯರು ಹಾಗೂ ಪುರಸಭೆ ಕಾಲೇಜು ಪ್ರಾಚಾರ್ಯರು ಉಪಸ್ಥಿತರಿದ್ದರು.

