ಬೆಂಗಳೂರು: ಭಾರತೀಯ ಅಂಚೆ ಇಲಾಖೆಯ ಮೇಲ್ ಮೋಟಾರ್ ಸರ್ವಿಸ್ (ಎಂಎಂಎಸ್) ಬೆಂಗಳೂರು ವತಿಯಿಂದ ಸ್ಕಿಲ್ಡ್ ಆರ್ಟಿಸನ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 4 ಖಾಲಿ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆಯ ದಿನಾಂಕ 2026ರ ಜುಲೈ 18 ಆಗಿದೆ.
ಹುದ್ದೆಗಳ ವಿವರ:
· ಎಂ.ವಿ. ಮೆಕಾನಿಕ್: 1 ಹುದ್ದೆ
· ಅಪ್ಹೋಲ್ಸ್ಟರ್: 1 ಹುದ್ದೆ
· ಕಾರ್ಪೆಂಟರ್ ಕಮ್ ಜಾಯ್ಂಟರ್: 1 ಹುದ್ದೆ
· ಪೇಂಟರ್: 1 ಹುದ್ದೆ
ವಿದ್ಯಾರ್ಹತೆ:
ಅಭ್ಯರ್ಥಿಗಳು ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು ಅಥವಾ 8ನೇ ತರಗತಿ ಪಾಸಾಗಿ 1 ವರ್ಷದ ಅನುಭವ ಹೊಂದಿರಬೇಕು. ಎಂ.ವಿ. ಮೆಕಾನಿಕ್ ಹುದ್ದೆಗೆ ಭಾರಿ ವಾಹನ ಚಾಲನಾ ಪರವಾನಗಿ ಕಡ್ಡಾಯ.
ವಯೋಮಿತಿ (01.01.2026 ರಂತೆ):
· ಸಾಮಾನ್ಯ/ಇಡಬ್ಲ್ಯೂಎಸ್: 18-30 ವರ್ಷಗಳು
· ಒಬಿಸಿ: 3 ವರ್ಷ ಸಡಿಲಿಕೆ (33 ವರ್ಷಗಳವರೆಗೆ)
· ಎಸ್ಸಿ/ಎಸ್ಟಿ: 5 ವರ್ಷ ಸಡಿಲಿಕೆ (35 ವರ್ಷಗಳವರೆಗೆ)
· ಕೇಂದ್ರ ಸರ್ಕಾರಿ ನೌಕರರಿಗೆ: 40 ವರ್ಷಗಳವರೆಗೆ
ವೇತನ ಮತ್ತು ಶುಲ್ಕ:
· ವೇತನ: ₹19,900 – ₹63,200 + ಭತ್ಯೆಗಳು (7ನೇ ವೇತನ ಆಯೋಗ)
· ಅರ್ಜಿ ಶುಲ್ಕ: ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ಗೆ ₹100; ಎಸ್ಸಿ/ಎಸ್ಟಿ/ಮಹಿಳೆಯರಿಗೆ ಉಚಿತ.
· ಪರೀಕ್ಷಾ ಶುಲ್ಕ: ₹400 (ಟ್ರೇಡ್ ಟೆಸ್ಟ್ಗೆ ಆಯ್ಕೆಯಾದವರಿಗೆ)
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿ, ಭರ್ತಿ ಮಾಡಿ, ಅಗತ್ಯ ದಾಖಲೆಗಳ ಜೊತೆಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
The Manager, Mail Motor Service, Department of Posts, No.4, Basaveshwara Road, Vasanth Nagar, Bengaluru-560001.
ಲಕೋಟೆಯ ಮೇಲೆ “Application for the post of Skilled Artisan in trade __” ಎಂದು ನಮೂದಿಸಬೇಕು.
ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಟ್ರೇಡ್ ಟೆಸ್ಟ್ (ಪ್ರಾಯೋಗಿಕ ಪರೀಕ್ಷೆ) ನಡೆಸಲಾಗುವುದು. ಪರೀಕ್ಷೆಯ ಅಂಕಗಳು ಮತ್ತು ತಾಂತ್ರಿಕ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು:
· ಅಧಿಸೂಚನೆ ದಿನಾಂಕ: 16.06.2026
· ಅರ್ಜಿ ಪ್ರಾರಂಭ: 27.06.2026
· ಕೊನೆಯ ದಿನಾಂಕ: 18.07.2026 (ಸಂಜೆ 5:00 ರವರೆಗೆ)
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ https://www.indiapost.gov.in ಭೇಟಿ ನೀಡಿ.

