ರಾಜಕೀಯ ಸುದ್ದಿ

ಸಂಪುಟ ವಿಸ್ತರಣೆ ಕಸರತ್ತು : ಜು.5ಕ್ಕೆ ಸಿಎಂ ಡಿಕೆಶಿ ಮತ್ತು ಸಿದ್ದರಾಮಯ್ಯ ದೆಹಲಿಗೆ !

Share It

ಬೆಂಗಳೂರು: ಸಂಪುಟ ವಿಸ್ತರಣೆ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಜುಲೈ 5ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈಗಾಗಲೇ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡಿ ಒಂದು ತಿಂಗಳು ಕಳೆದಿದೆ. ಆದರೆ, ಸಂಪುಟದ ಗಾತ್ರ ಮಾತ್ರ ಅರ್ಧರಷ್ಟು ಮಾತ್ರವೇ ಇದೆ. ಇದನ್ನು ಹಿಗ್ಗಿಸಲು ಇದೀಗ ಕಸರತ್ತು ನಡೆದಿದ್ದು, ದೆಹಲಿಯ ಕಡೆಗೆ ಉಭಯ ನಾಯಕರು ದೌಡಾಯಿಸಲಿದ್ದಾರೆ.

ಎರಡನೇ ಹಂತದಲ್ಲಿ ಡಿಕೆಶಿ ಸಂಪುಟ ಸೇರಲು ಅನೇಕ ನಾಯಕರು ಕಸರತ್ತು ನಡೆಸಿದ್ದರು. ಕೆಲವರು ಹೈಕಮಾಂಡ್ ಮಟ್ಟದಲ್ಲೂ ಲಾಭಿ ನಡೆಸಿದ್ದು, ತಮಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹಾಕಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಆಪ್ತರು ಮತ್ತು ಹಿಂಬಾಲಕ ಶಾಸಕರು ಸಿದ್ದರಾಮಯ್ಯ ಅವರ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಸಂತೋಷ್ ಲಾಡ್, ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್ ತಮ್ಮನ್ನು ಸಂಪುಟದಲ್ಲಿ ಮುಂದುವರಿಕೆ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಜಮೀರ್ ಅಹಮದ್ ಪರವಾಗಿ ಅನೇಕರು ಬ್ಯಾಟಿಂಗ್ ನಡೆಸಿದ್ದಾರೆ. ಈ ನಡುವೆ ಕೆಲವು ಹೊಸಮುಖಗಳಿಗೆ ಮಣೆ ಹಾಕುವ ಸಾಧ್ಯತೆಗಳು ಇದ್ದು, ಕೆಲವರು ಲಾಭಿ ಆಂಭಿಸಿದ್ದಾರೆ.


Share It

You cannot copy content of this page