ಬೆಂಗಳೂರು: ಯುವತಿಯೊಬ್ಬಳು ಸ್ಯಾಂಕಿ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರ ನಿರಂತರ ಹುಡುಕಾಟದ ನಂತರ ಶವ ಇಂದು ಮುಂಜಾನೆ ಪತ್ತೆಯಾಗಿದೆ.
ಚಿಕ್ಕಬಾಣಾವರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ತೇಜು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತನ್ನ ಬಾಯ್ ಫ್ರೆಂಡ್‌ಗೆ ಮೆಸೇಜ್ ಮಾಡಿದ್ದಳು. ಅನಂತರ ಸ್ಯಾಂಕಿ ಕೆರೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಯುವಕನಿಗೆ ಮೆಸೇಜ್ ಮಾಡಿದ ನಂತರ ಆಕೆ 3.50ಕ್ಕೆ ಕಾಲೇಜಿನಿಂದ ಹೊರಟಿದ್ದಳು. ಮೆಸೇಜ್‌ನಲ್ಲಿ ಸ್ಯಾಂಕಿ ಕೆರೆಗೆ ಹೋುತ್ತಿರುವುದಾಗಿ ತಿಳಿಸಿ, ನಂತರ ಮೊಬೈಲ್ ಅನ್ನು ತನ್ನ ಬ್ಯಾಗ್‌ನಲ್ಲಿಯೇ ಇಟ್ಟಿದ್ದಳು ಎನ್ನಲಾಗಿದೆ.
ಆಕೆಯ ಬಾಯ್‌ಫ್ರೆಂಡ್ ಯುವತಿಯ ಕುಟುಂಬಸ್ಥರಿಗೆ ಈ ವಿಷಯವನ್ನು ಕರೆ ಮಾಡಿ ತಿಳಿಸಿದ್ದು, ಯುವತಿಯ ತಾಯಿ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಸ್ಯಾಂಕಿ ಕೆರೆಯಲ್ಲಿ ಹುಟುಕಾಟ ನಡೆಸಿದ್ದು, ಇಂದು ಮುಂಜಾನೆ ಯುವತಿಯ ಶವ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

