ಉಪಯುಕ್ತ ಸುದ್ದಿ

ನೀರಾವರಿ ಯೋಜನೆ ಭೂ ಪರಿಹಾರ ಬಿಡುಗಡೆಗೆ ಮನವಿ: ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾದ ಶಾಸಕ ಸಿ. ಎನ್. ಬಾಲಕೃಷ್ಣ

Share It

ಬೆಂಗಳೂರು: ಚನ್ನರಾಯಪಟ್ಟಣ ಕೆರೆಯಿಂದ ತಾಲೂಕಿನ 25 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಭೂ ಪರಿಹಾರ ನೀಡದಿರುವ ಕಾರಣದಿಂದ ಹಿನ್ನಡೆಯಾಗಿದ್ದು, ಪರಿಹಾರ ಬಿಡುಗಡೆ ಮಾಡುವಂತೆ ಶಾಸಕ ಬಾಲಕೃಷ್ಣ ಸಚಿವ ರಾಮಲಿಂಗ ರೆಡ್ಡಿ ಆ ಅವರಿಗೆ ಮನವಿ ಮಾಡಿದರು.

ವಿಧಾನಸೌಧದ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿದ ಅವರು, ಚನ್ನರಾಯಪಟ್ಟಣ ಅಮಾನಿಕೆರೆಯಿಂದ 25 ಕೆರೆಗಳಿಗೆ ನೋರಿ ಹರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಆದರೆ, ಕಾಮಗಾರಿಗೆ ಆರಂಭದ 16 ಕಿಮೀ ವ್ಯಾಪ್ತಿಯ ರೈತರಿಗೆ ಅವಾರ್ಡ್ ಹಣ ನಿಗದಿಯಾಗದ ಕಾರಣಕ್ಕೆ ಯೋಜನೆ ವಿಳಂಬವಾಗಿದೆ. ಭೂಮಿ ಕಳೆದುಕೊಂಡ ರೈತರು ಕಾಮಗಾರಿಗೆ ಅಡಚಣೆ ಮಾಡುತ್ತಿದ್ದು, ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಭೂ ಪರಿಹಾರ ಮೊತ್ತ ಹಾಗು ಕಟ್ಟಡ ಹಾಗು ಇತರೆ ಮೌಲ್ಯಮಾಪನ ಅನುದಾನ 11.19 ಕೋಟಿ ಅಗತ್ಯವಿದ್ದು, ಇದನ್ನು ಬಿಡುಗಡೆ ಮಾಡಿ ತಾಲೂಕಿನ ರೈತರ ಹಿತ ಕಾಯಬೇಕು. ಹೀಗಾಗಿ ತಾವು ಕೂಡಲೇ ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿ ತಾಲುಕಿನ್ ರೈತರಿಗೆ ಮತ್ತು ಕುಡಿಯುವ ನೀರಿನ ಅಗತ್ಯತೆಗೆ ಸ್ಪಂದಿಸಬೇಕು ಎಂದು ಶಾಸಕ ಬಾಲಕೃಷ್ಣ ಮನವಿ ಮಾಡಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರ ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಹಣ ಬಿಡುಗಡೆ ಮಾಡುವಂತೆ ಸೂಚನೆ ನೀಡಿದರು.


Share It

You cannot copy content of this page