ಸುದ್ದಿ

BLO ಸೂಪರ್ ವೈಸರ್ ಭುವನ ಸಾವಿಗೆ ಅಧಿಕಾರಿಗಳ ಒತ್ತಡವೇ ಕಾರಣ : ಪೋಷಕರ ಆರೋಪ

Share It

ತುಮಕೂರು: ತುಮಕೂರು ಜಿಲ್ಲೆಯ ಬಿಎಲ್‌ಒ ಸೂಪರ್ ವೈಸರ್ ಆಗಿದ್ದ ವಿಎ ಭುವನಾ ಸಾವಿಗೆ ಹಿರಿಯ ಅಧಿಕಾರಿಗಳ ಒತ್ತಡವೇ ಕಾರಣ ಎಂದು ಪೋಷಕರು ಮತ್ತು ಇತರೆ ಸಿಬ್ಬಂದಿ ಆರೋಪಿಸಿದ್ದಾರೆ.

ಭುವನಾ ಬೆಂಗಳೂರಿನ ಮಾದನಾಯಕನಹಳ್ಳಿಯಿಂದ ಬೆಳಗ್ಗೆ 6 ಗಂಟೆಗೆ ಹೊರಟಿದ್ದರು. ತಹಸೀಲ್ದಾರ್ ಬೆಳಗ್ಗೆ 6.30 ಗಂಟೆ ಸುಮಾರಿಗೆ ಎಲ್ಲರೂ ಫೀಲ್ಡ್‌ನಲ್ಲಿರಬೇಕು ಎಂದು ವಾಟ್ಸಾಪ್ ಮೆಸೇಜ್ ಕಳುಹಿಸಿದ್ದರು.

ತುಮಕೂರು ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ತಮ್ಮ ಬೈಕ್ ಮೂಲಕ ಭುವನಾ ಹೊರಟಿದ್ದು, ಗೂಳೂರು ಬಳಿ ಹಿಂದಿನಿಂದ ಓವರ್ ಟೇಕ್ ಮಾಡಲು ಬಂದ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಅನಂತರ ಸಂಜೆ 5.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಇಷ್ಟೊಂದು ಒತ್ತಡ ಹಾಕುವ ಹಿರಿಯ ಅಧಿಕಾರಿಗಳ ಮನಸ್ಥಿತಿಯಿಂದಾಗಿಯೇ ಭುವನಾ ಸಾವಾಗಿದೆ. ಹೀಗಾಗಿ, ಆಕೆಯ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share It

You cannot copy content of this page