ಬೆಂಗಳೂರು: ಸೋಮವಾರ ನೂತನ ಸಚಿವ ಸಂಪುಟ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವುದು ಫೈನಲ್ ಎನ್ನಲಾಗಿದ್ದು, 20 ಸಚಿವರ ಪಟ್ಟಿಯೂ ಸಿದ್ಧಗೊಂಡಿದೆ.
ನಾಲ್ಕೈದು ದಿನಗಳ ದೆಹಲಿ ಪ್ರವಾಸ ವೇಳೆಯಲ್ಲಿ ನಡೆದ ಕಸರತ್ತಿನಲ್ಲಿ 20 ಸದಸ್ಯರ ಪಟ್ಟಿಯನ್ನು ಸಿದ್ಧಗೊಳಿಸಿ, ಚರ್ಚೆ ನಡೆಸಿ ಅಂತಿಮಗೊಳೀಸಲಾಗಿದ್ದು, ಹೈಕಮಾಂಡ್ ಅಂತಿಮ ಮುದ್ರೆಯಷ್ಟೇ ಬಾಕಿಯಿದೆ. ಭಾನುವಾರ ರಾತ್ರಿ ಹೈಕಮಾಂಡ್ ಅಧಿಕೃತವಾಗಿ ಪಟ್ಟಿಯನ್ನು ಅಂಗೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಅಜಯ್ ಧರಂ ಸಿಂಗ್ (ಕಲಬುರಗಿ), ಯಶವಂತರಾಯಗೌಡ ಪಾಟೀಲ್ (ವಿಜಯಪುರ), ಶರತ್ ಬಚ್ಚೇಗೌಡ (ಬೆಂಗಳೂರು ಗ್ರಾಮಾಂತರ), ರಿಜ್ವಾನ್ ಅರ್ಷದ್ (ಬೆಂಗಳೂರು), ಎಎಸ್ ಪೊನ್ನಣ್ಣ (ಕೊಡಗು), ಎಸ್ ಎಸ್ ಮಲ್ಲಿಕಾರ್ಜುನ್ (ದಾವಣಗೆರೆ), ರಘುಮೂರ್ತಿ (ಚಿತ್ರದುರ್ಗ), ಅನ್ನಪೂರ್ಣ ತುಕಾರಾಂ (ಬಳ್ಳಾರಿ), ವಿಜಯಾನಂದ ಕಾಶಪ್ಪನವರ್ (ಬಾಗಲಕೋಟ), ಸಿ ಪುಟ್ಟರಂಗ ಶೆಟ್ಟಿ (ಚಾಮರಾಜನಗರ), ರುದ್ರಪ್ಪ ಲಮಾಣಿ (ಹಾವೇರಿ), ಆನೇಕಲ್ ಶಿವಣ್ಣ (ಬೆಂಗಳೂರು), ಎನ್ ಚೆಲುವರಾಯಸ್ವಾಮಿ (ಮಂಡ್ಯ), ಸಂತೋಷ್ ಲಾಡ್ (ಧಾರವಾಡ), ಜಮೀರ್ ಅಹಮದ್ ಖಾನ್ (ಬೆಂಗಳೂರು) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (ಬೆಳಗಾವಿ) ಇವರು ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

