ಸುದ್ದಿ

UGNEET-2026: ವೈದ್ಯಕೀಯ ಪ್ರವೇಶಕ್ಕಾಗಿ ದಾಖಲೆ ಪರಿಶೀಲನೆ ಆಗಸ್ಟ್ 4-8ರವರೆಗೆ

Share It

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು UGNEET-2026ರ ಮೂಲಕ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲೆ ಪರಿಶೀಲನಾ ಕಾರ್ಯಕ್ರಮವನ್ನು ಆಗಸ್ಟ್ 4ರಿಂದ 8ರವರೆಗೆ ನಡೆಸಲಿದೆ.

KEA ಕಚೇರಿಯಲ್ಲಿ ನಡೆಯುವ ಈ ಪರಿಶೀಲನಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಆಗಸ್ಟ್ 2ರಂದು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಬಿಡುಗಡೆಯಾಗುವ ಲಿಂಕ್ ಮೂಲಕ ಸ್ಲಾಟ್ ಅನ್ನು ಮುಂಚಿತವಾಗಿ ಬುಕ್ ಮಾಡಿಕೊಳ್ಳಬೇಕು. ಸ್ಲಾಟ್ ಬುಕ್ ಮಾಡಿದ ಅಭ್ಯರ್ಥಿಗಳಿಗೆ ಮಾತ್ರ ಕಚೇರಿಯಲ್ಲಿ ದಾಖಲೆ ಪರಿಶೀಲನೆಗೆ ಅವಕಾಶ ನೀಡಲಾಗುತ್ತದೆ ಎಂದು KEA ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ತಿಳಿಸಿದ್ದಾರೆ.

ಯಾರೆಲ್ಲಾ ದಾಖಲೆ ಪರಿಶೀಲನೆಗೆ ಹಾಜರಾಗಬೇಕು?:

· NRI ವಾರ್ಡ್, NRI ಮತ್ತು ವಿದೇಶಿ ರಾಷ್ಟ್ರೀಯತೆ (Foreign Nationals) ವರ್ಗಗಳನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು
· CET-2026ಕ್ಕೆ ನೋಂದಣಿ ಮಾಡಿಕೊಂಡು ಪರಿಶೀಲನಾ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳದಿರುವ ಅಭ್ಯರ್ಥಿಗಳು (ಕನ್ನಡ, ಗ್ರಾಮೀಣ, ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ಕ್ಲೇಮ್ ಮಾಡಿರುವವರು)
· ಹೊಸದಾಗಿ ನೋಂದಣಿ ಮಾಡಿ ಕನ್ನಡ, ಗ್ರಾಮೀಣ, ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು

ವಿಶೇಷ ಸೂಚನೆ: ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿಗೆ (ಕ್ಯಾಟಗರಿ-2 ರಿಂದ 8ರವರೆಗೆ) ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಕೆಇಎ ಕಚೇರಿಗೆ ಬರದೇ, ನೇರವಾಗಿ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ನಡೆಯುವ ದಾಖಲೆ ಪರಿಶೀಲನೆಗೆ ಹಾಜರಾಗಬೇಕು.

ಆದರೆ, ಕ್ಯಾಟಗರಿ – RC-1 ಮತ್ತು ಕ್ಯಾಟಗರಿ- RC-9 ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಬರುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ KEA ಅಧಿಕೃತ ವೆಬ್ಸೈಟ್ ವೀಕ್ಷಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.

ಸಹಾಯವಾಣಿ ಸಮಸ್ಯೆ: ಪ್ರಸ್ತುತ ಸ್ಲಾಟ್ ಬುಕಿಂಗ್ ಲಿಂಕ್ಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಮತ್ತು ಸಹಾಯವಾಣಿ ಕೂಡ ಸ್ಪಂದಿಸುತ್ತಿಲ್ಲ ಎಂದು ಕೆಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅಭ್ಯರ್ಥಿಗಳು KEA ವೆಬ್ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು ಮತ್ತು ಲಿಂಕ್ ಬಿಡುಗಡೆಯಾದ ತಕ್ಷಣ ಸ್ಲಾಟ್ ಬುಕ್ ಮಾಡಿಕೊಳ್ಳಬೇಕು.


Share It

You cannot copy content of this page