ಚೆನ್ನೈ: ತಮಿಳುನಾಡು ಪೊಲೀಸರು ಮಾಜಿ ಉಪಮುಖ್ಯಮಂತ್ರಿ ಸ್ಟಾಲಿನ್ ಬಂಧಿಸಿದ್ದು, ವಿಚಾರಣೆ ನಡೆಸಿ, ಬಿಟ್ಟುಕಳುಹಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ನಟಿ ತ್ರಿಶಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ದೂರಿನ ಆಧಾರದಲ್ಲಿ ಪೊಲೀಸರು ಉದಯನಿಧಿ ಅವರನ್ನು ಅವರ ಮನೆಯಿಂದ ಬಂಧಿಸಿ ಕರೆದೊಯ್ದಿದ್ದರು. ಪೊಲೀಸರ ಕ್ರಮದ ವಿರುದ್ಧ ಉದಯನಿಧಿ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದು, ಜಾಮೀನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಪೊಲೀಸ್ ಪರ ವಕೀಲರು ಬಂಧನವನ್ನು ನಿರಾಕರಿಸಿದರು.
ಪೊಲೀಸರು ವಿಚಾರಣೆಗಾಗಿ ಅವರನ್ನು ಪೊಲೀಸ್ ಸ್ಟೇಷನ್ಗೆ ಕರೆದೊಯ್ದಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕೆಕ ಒಪ್ಪಿಸುವ ಯಾವುದೇ ಉದ್ದೇಶ ಪೊಲೀಸರಿಗೆ ಇಲ್ಲ. ವಿಚಾರಣೆ ನಡೆಸಿ, ಅವರನ್ನು ಕಳುಹಿಸಿಕೊಡಲಾಗುವುದು ಎಂದಿದ್ದರು. ತಮಿಳುನಾಡು ವಿಪಕ್ಷ ನಾಯಕರು ಆಗಿರುವ ಉದಯನಿಧಿ ಅವರನ್ನು ವಿಚಾರಣೆ ನಂತರ ಬಿಡುಗಡೆಗೊಳಿಸುವಂತೆ ಸೂಚಿಸಿದ ನ್ಯಾಯಾಲಯ, ಪೊಲೀಸರಿಗೆ ಸೂಚನೆ ನೀಡಿ ಅರ್ಜಿಯನ್ನು ವಜಾಗೊಳಿಸಿತು.

