ಅಪರಾಧ ರಾಜಕೀಯ ಸುದ್ದಿ

ಕನ್ನಡ ಹೋರಾಟಗಾರರಿಂದ ಸಿಎಂ ಭೇಟಿ: ಬಂದ್ ಪಾವಸ್

Share It

ಬೆಂಗಳೂರು: ಕಾವೇರಿ ವಿಚಾರದಲ್ಲಿ ಇಂದು ಕನ್ನಡಪರ ಸಂಘಟನೆಗಳು ಕರೆದಿದ್ದ ಬಂದ್ ವಾಪಸ್ ಪಡೆಯಲು ಕನ್ನಡಪರ ಸಂಘಟನೆಗಳ ಮುಖಂಡರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ವಾಟಾಳ್ ನಾಗರಾಜ್, ಸಾ ರಾ ಗೋವಿಂದು ಸೇರಿದಂತೆ ಕೆಲವು ಕನ್ನಡ ಹೋರಾಟಗಾರರು, ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ ನಂತರ ಬಂದ್ ವಾಪಸ್ ಪಡೆಯಲು ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದು, ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಬಂದ್ ಪಾವಸ್ ಪಡೆಯಲಾಗಿದೆ ಎಂದರು.

ಕೆಲವು ಕಡೆಯಷ್ಟೇ ಕೆಲ ಹೋರಾಟಗಾರರು ಬಂದ್ ನಡೆಸುವ ಪ್ರಯತ್ನ ಮಾಡಿದರು. ಕೆಲವರನ್ನು ಪೊಲೀಸರು ಮುಂಜಾಗೃತಾ ಕ್ರಮವಾಗಿ ವಶಕ್ಕೆ ಪಡೆದರು. ಕಾವೇರಿ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಕಾಯ್ದು ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದು, ಇದರಿಂದ ಬಂದ್ ವಾಪಸ್ ಪಡೆಯಲಾಗಿದೆ ಎಂದು ಮೂಲಗಳೂ ತಿಳಿಸಿವೆ.


Share It

You cannot copy content of this page