ಅಪರಾಧ ಸುದ್ದಿ

ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್: ಸಿಲಿಂಡರ್‌ಗಳು ಸರಣಿ ಸ್ಫೋಟ

Share It

ಬೆಂಗಳೂರು : ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಕಗ್ಗದಾಸಪುರದ 6ನೇ ಕ್ರಾಸ್‌ನಲ್ಲಿರುವ ಪಾಳು ಜಾಗದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ವೇಳೆ ದಿಢೀರನೇ ನಾಲ್ಕು ಸಿಲಿಂಡರ್‌ಗಳು ಸರಣಿ ಸ್ಫೋಟಗೊಂಡಿವೆ.

ಸ್ಫೋಟದ ರಭಸಕ್ಕೆ ಸಿಲಿಂಡರ್‌ ಒಂದರ ಭಾಗ ಪಕ್ಕದಲ್ಲೇ ಇದ್ದ ಶಾಲೆಯ ಕಿಟಕಿಗೆ ಬಂದು ಬಿದ್ದಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಮೂರ್ತಿ ಎಂಬುವವರಿಗೆ ಸೇರಿದ ಪಾಳು ಜಾಗದ ಶೆಡ್‌ನಲ್ಲಿ ಗ್ಯಾಸ್ ರೀಫಿಲ್ಲಿಂಗ್ ಮಾಡಲಾಗುತ್ತಿತ್ತು.

ಸ್ಫೋಟದ ತೀವ್ರತೆಗೆ ಶೆಡ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬೆಂಕಿ ಹತೋಟಿಗೆ ತಂದಿದ್ದಾರೆ.​ ಘಟನಾ ಸ್ಥಳಕ್ಕೆ ಎಸಿಪಿ ಹಾಗೂ ಇನ್ಸ್​​ಪೆಕ್ಟರ್​ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆ, ಘಟನೆಗೆ ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.


Share It

You cannot copy content of this page