ಚಾಮರಾಜ ನಗರ: ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಬೇಟೆಗಾರರು ಬಲಿಯಾಗಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.
ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ನಡೆದಿರುವ ಘಟನೆಯಿಂದ ಅಂತೋಣಿಸ್ವಾಮಿ, ಕುಮಾರ್ ಮತ್ತು ಮತ್ತೊಬ್ಬ ವ್ಯಕ್ತಿ ಪೀಟರ್ ಮೃತಪಟ್ಟಿದ್ದಾರೆ. ಇವರು ಬೇಟೆಗಾರರು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದು, ದಿಡೀರ್ ಎನ್ಕೌಂಟರ್ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೇಟೆಗಾರರಾಗಿದ್ದರು ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕಿತ್ತು. ಏಕಾಏಕಿ ಗುಂಡು ಹಾರಿಸಿರುವುದು ಎಷ್ಟು ಸರಿ ಎಂದು ಪೋಷಕರು ಪ್ರಶ್ನೆ ಮಾಡಿದ್ದಾರೆ. DRFO ಕಚೇರಿಗೆ ನುಗ್ಗಿದ ಸಂಬಂಧಿಕರು ಕಚೇರಿಯನ್ನು ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ. ಮೃತರ ಶವಗಳನ್ನು ಮೈಸೂರಿನ ಶವಗಾರಕ್ಕ್ ಸಾಗಿಸಲಾಗಿದೆ.

