ಕ್ರೀಡೆ ಸುದ್ದಿ

ಬೆಂಗಳೂರು ಓಪನ್ ಪ್ರಶಸ್ತಿ ಗೆದ್ದ ಖಲೀನ ಜೋಷಿ

Share It

ಬೆಂಗಳೂರು : ಬೆಂಗಳೂರಿನ ಖಲೀನ್ಜೋಶಿ ಅವರು ಕೆಜಿಎಯಲ್ಲಿ ನಡೆದ ₹1 ಕೋಟಿ ಬಹುಮಾನಮೊತ್ತದ ಬೆಂಗಳೂರು ಓಪನ್ 2026 ಪವರ್ಡ್ ಬೈಇಂಡಿಯನ್‌ಆಯಿಲ್ ಟೂರ್ನಿಯಲ್ಲಿ ತಂತಿ-ತಂತಿಯಾಗಿ(ವೈರ್-ಟು-ವೈರ್) ಮುನ್ನಡೆ ಕಾಯ್ದುಕೊಂಡು ಐದು ಶಾಟ್‌ಗಳಭರ್ಜರಿ ಗೆಲುವು ದಾಖಲಿಸಿದರು. ಅಂತಿಮ ಸುತ್ತಿನಲ್ಲಿ ಎರಡುಅಂಡರ್ 70 ಸ್ಕೋರ್ ಮಾಡಿದ ಜೋಶಿ, ಒಟ್ಟು 20 ಅಂಡರ್268 ಸ್ಕೋರ್‌ನೊಂದಿಗೆ ಪ್ರಶಸ್ತಿ ಗೆದ್ದರು.

34 ವರ್ಷದ ಜೋಶಿ, 61-68-69-70 ಸ್ಕೋರ್‌ಗಳೊಂದಿಗೆ ಒಟ್ಟು268 ಸ್ಟ್ರೋಕ್‌ಗಳನ್ನು ದಾಖಲಿಸಿದರು. ಐದು ಬರ್ಡಿಗಳು ಮತ್ತುಮೂರು ಬೋಗಿಗಳೊಂದಿಗೆ ಅಂತಿಮ ಸುತ್ತು ಪೂರ್ಣಗೊಳಿಸಿದಅವರು, ತಮ್ಮ 10ನೇ ಡಿಪಿ ವರ್ಲ್ಡ್ ಪಿಜಿಟಿಐ ಪ್ರಶಸ್ತಿ ಹಾಗೂ ಈಋತುವಿನ ನಾಲ್ಕನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

2018ರಲ್ಲಿ ಏಷ್ಯನ್ ಟೂರ್ ಪ್ರಶಸ್ತಿ ಗೆದ್ದಿದ್ದ ಜೋಶಿ, ಕಳೆದ ವಾರನಡೆದ ಎಸ್‌ಇಸಿಎಲ್ ಪ್ರೆಸೆಂಟ್ಸ್ ನವಾ ರಾಯ್‌ಪುರ ಓಪನ್ಬಳಿಕ ಸತತ ಎರಡನೇ ಪ್ರಶಸ್ತಿ ಗೆದ್ದಿದ್ದಾರೆ. ಈ ಗೆಲುವಿನಿಂದಅವರು ₹15 ಲಕ್ಷ ಬಹುಮಾನ ಪಡೆದಿದ್ದು, 2026ರ ಡಿಪಿ ವರ್ಲ್ಡ್ಪಿಜಿಟಿಐ ಆರ್ಡರ್ ಆಫ್ ಮೆರಿಟ್‌ನಲ್ಲಿ ಏಳನೇ ಸ್ಥಾನದಿಂದಎರಡನೇ ಸ್ಥಾನಕ್ಕೆ ಏರಿದ್ದಾರೆ. ಅವರ ಒಟ್ಟು ಋತುಮಾನದಆದಾಯ ₹67,34,225ಕ್ಕೆ ಏರಿಕೆಯಾಗಿದೆ.

ಗುರುಗ್ರಾಮದ ಮನು ಗಾಂಡಸ್ 15 ಅಂಡರ್ 273 ಸ್ಕೋರ್‌ನೊಂದಿಗೆ ರನ್ನರ್-ಅಪ್ ಸ್ಥಾನ ಪಡೆದರು. ಅವರು ₹10 ಲಕ್ಷ ಬಹುಮಾನ ಪಡೆದರು. ಗುರುಗ್ರಾಮದ ವೀರ್ ಅಹ್ಲಾವತ್ಮತ್ತು ಗ್ರೇಟರ್ ನೋಯ್ಡಾದ ಸಪ್ತಕ್ ತಲ್ವಾರ್ ತಲಾ 12 ಅಂಡರ್ 276 ಸ್ಕೋರ್‌ನೊಂದಿಗೆ ಜಂಟಿ ಮೂರನೇ ಸ್ಥಾನಪಡೆದರು.

ಗೆಲುವಿನ ಬಳಿಕ ಮಾತನಾಡಿದ ಜೋಶಿ, ಇತ್ತೀಚಿನ ಯಶಸ್ಸಿಗೆತಮ್ಮ ಮಾನಸಿಕ ದೃಢತೆ ಮತ್ತು ಒತ್ತಡದ ಸಂದರ್ಭಗಳಲ್ಲಿಶಾಂತವಾಗಿ ಆಡುವ ಸಾಮರ್ಥ್ಯ ಪ್ರಮುಖ ಕಾರಣ ಎಂದುಹೇಳಿದರು.

ಕೆಜಿಎಯಲ್ಲಿ ಬಾಲ್ಯದಿಂದಲೇ ಗಾಲ್ಫ್ ಆಡಲು ಆರಂಭಿಸಿದ್ದಜೋಶಿಗೆ ತವರು ನೆಲದಲ್ಲಿ ಪ್ರಶಸ್ತಿ ಗೆದ್ದಿರುವುದು ವಿಶೇಷವಾಗಿದೆ. “ಕೆಜಿಎಯಲ್ಲಿ ಗೆಲ್ಲುವುದು ನನ್ನ ಬಹುಕಾಲದ ಕನಸಾಗಿತ್ತು. ತವರಿನಲ್ಲಿ ಕೊನೆಗೂ ಪ್ರಶಸ್ತಿ ಗೆದ್ದಿರುವುದು ನನಗೆ ಅಪಾರಸಂತಸ ತಂದಿದೆ,” ಎಂದು ಅವರು ಹೇಳಿದರು.

ಬೆಂಗಳೂರು ಓಪನ್‌ನೊಂದಿಗೆ 2026ರ ಡಿಪಿ ವರ್ಲ್ಡ್ ಪಿಜಿಟಿಐಆರ್ಡರ್ ಆಫ್ ಮೆರಿಟ್‌ನ ಅಗ್ರ 60 ಆಟಗಾರರ ರೇಸ್ ಕೂಡಅಂತ್ಯಗೊಂಡಿದ್ದು, ಅಗ್ರ 60ರಲ್ಲಿ ಸ್ಥಾನ ಪಡೆದ ಆಟಗಾರರು2026–27ರ ಋತುವಿನ ಆಟದ ಹಕ್ಕುಗಳನ್ನುಉಳಿಸಿಕೊಂಡಿದ್ದಾರೆ.


Share It

You cannot copy content of this page