ರಾಜಕೀಯ ಸುದ್ದಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ದ ವಯಕ್ತಿಕ ಆರೋಪ ಖಂಡನಾರ್ಹ: ಬಸವರಾಜ ಬೊಮ್ಮಾಯಿ

Share It

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕ್ಷಮೆ ಕೇಳಲು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ರೈತರ ಪ್ರತಿಭಟನೆ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬಗ್ಗೆ
ವಯಕ್ತಿಕವಾಗಿ ಟೀಕೆ ಮಾಡಿರುವಂತ ಕೆಲವರು ತಮ್ಮ ಸಂಸ್ಕೃತಿಯ ಎಲೆ ಮೀರಿ ಮಾತನಾಡಿದ್ದಾರೆ, ಇದು ನಮಗೆ ಬಹಳ ದುಃಖ ತಂದಿದೆ. ಒಬ್ಬ ಮಂತ್ರಿಗೆ ವಯಕ್ತಿಕ ಮತ್ತು ಅವರ ಮನೆಯವರ ಹೆಸರಿನಲ್ಲಿ ಅತ್ಯಂತ ಕೀಳುಮಟ್ಟದ ಬೈಗಳನ್ನ ಬೈಯುವಂತದ್ದು ಅತ್ಯಂತ ಖಂಡನಾರ್ಹವಾಗಿದ್ದು ಕೂಡಲೆ ಅವರ ಕ್ಷಮೆ ಕೇಳಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸಚಿವ ಪ್ಲಹ್ಲಾದ ಜೋಶಿ ಅವರು ಪ್ರಾಮಾಣಿಕವಾಗಿ ಕಬ್ಬು ಬೆಳೆಗಾರರ ಸಮಸ್ಯೆಯನ್ನ ಬಗೆಹರಿಸುವ ನಿಟ್ಟಿನಲ್ಲಿದ್ದಾರೆ, ಅದಕ್ಕಾಗಿ ರೈತರನ್ನ ದೆಹಲಿಗೆ ಕರೆಯುವಂತಹ ಪ್ರಯತ್ನ ಮಾಡಿತ್ತಿದ್ದಾರೆ. ಪ್ರಾಮಾಣಿಕವಾಗಿರುವ ಒಬ್ಬ ಮಂತ್ರಿಗೆ ವಯಕ್ತಿಕ ಮತ್ತು ಅವರ ಮನೆಯವರ ಹೆಸರಿನಲ್ಲಿ ಅತ್ಯಂತ ಕೀಳುಮಟ್ಟದ ಬೈಗುಳಗಳನ್ನು ಬೈಯುವಂತದ್ದು ಅತ್ಯಂತ ಖಂಡನಾರ್ಹ. ಇದು ಯಾರು ಕೂಡ ಒಪ್ಪುವುದಿಲ್ಲ, ಇದನ್ನು ರೈತರು ಕೂಡ ಒಪ್ಪುವುದಿಲ್ಲ, ರೈತ ಸಂಘಟನೆಯೂ ಒಪ್ಪಲ್ಲ ಅಂತ ನಾನು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ.
ಇಂತಹ ಮಾತನಾಡುವುದರ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು ಬರುವಂತಹ ದಿನಗಳಲ್ಲಿ ಯಾರಿಗೂ ಯಾವುದೇ ಕಾರಣಕ್ಕೂ ವೈಯಕ್ತಿಕ ವಿಚಾರಗಳಲ್ಲಿ ಮಾತನಾಡುವುದು ಸೂಕ್ತ ಅಲ್ಲ. ಪ್ರಹ್ಲಾದ್ ಜೋಶಿ ಅವರಿಗೆ ಅವರ ಕುಟುಂಬಕ್ಕೆ ಏನು ಮನಸ್ಸಿಗೆ ನೋವಾಗಿದೆ ಅದಕ್ಕೆ ಅವರ ವಿರುದ್ದ ವಯಕ್ತಿಕ ಆರೋಪ ಮಾಡಿರುವ ಹೋರಾಟಗಾರರು ಕ್ಷಮೆಯನ್ನು ಕೇಳಬೇಕು ಎಂದು ಆಗ್ರಹಿಸಿದ್ದಾರೆ.


Share It

You cannot copy content of this page