ಆರೋಗ್ಯ ಸುದ್ದಿ

ಭಾರತದ ಶೇ.81 ಜನರು ಮಾಂಸಹಾರಿಗಳು : ವರದಿ

Share It

ನವದೆಹಲಿ: ಭಾರತದಲ್ಲಿ ಶೇ.81 ರಷ್ಟು ಜನರು ಮಾಂಸಾಹಾರ ಸೇವನೆ ಮಾಡುತ್ತಾರೆ ಎಂದು ವರದಿಯೊಂದು ಬಹಿರಂಗಗೊಳಿಸಿದೆ.

ವರದಿಯ ಪ್ರಕಾರ ದೇಶದ ಶೇ.81ರಷ್ಟು ಜನರು ಮಾಂಸಾಹಾರಿಗಳಾಗಿದ್ದು, ಇದರಲ್ಲಿ ಶೇ.87ರಷ್ಟು ಪುರುಷರು ಹಾಗೂ ಶೇ. 75 ರಷ್ಟು ಮಹಿಳೆಯರು ಮಾಂಸಾಹಾರಿಗಳು ಎಂದು ವರದಿ ಬಹಿರಂಗಗೊಳಿಸಿದೆ.

ರಾಜಸ್ತಾನದಲ್ಲಿ ಅತಿ ಕಡಿಮೆ ಸಂಖ್ಯೆಯ ಮಾಂಸಾಹಾರಿಗಳು ಅಂದರೆ, ಶೇ.44 ರಷ್ಟು ಮಾಂಸಾಹಾರಿಗಳಿದ್ದು, ಹರಿಯಾಣದಲ್ಲಿಯೂ ಶೇ.44 ರಷ್ಟು ಜನರು ಮಾಂಸಾಹಾರ ಸೇವನೆ ಮಾಡುತ್ತಾರೆ ಎಂದು ವರದಿ ತಿಳಿಸಿದೆ.

ನಂತರದ ಸ್ಥಾನದಲ್ಲಿ ಗುಜರಾತ್ ಇದ್ದು, ಇಲ್ಲಿನ ಶೇ.49 ಜನರು ಮಾಂಸಾಹಾರಿಗಳಾಗಿದ್ದಾರೆ. ಈಶಾನ್ಯ ರಾಜ್ಯಗಳಾದ ಮೀಜೋರಾಂ, ನಾಗಾಲ್ಯಾಂಡ್, ಮಣಿಪುರ ರಾಜ್ಯಗಳಲ್ಲಿನ ಶೇ. 99.9 ರಷ್ಟು ಜನರು ಮಾಂಸಾಹಾರಿಗಳು ಎಂದು ವರದಿ ಉಲ್ಲೇಖಿಸಿದೆ.

ಅಂತೆಯೇ ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯಗಳ ಶೇ.99ರಷ್ಟು ಜನರು ಮಾಂಸಾಹಾರಿಗಳಾಗಿದ್ದಾರೆ. ಉಳಿದಂತೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಒರಿಸ್ಸಾ, ಜಾರ್ಖಂಡ್ ರಾಜ್ಯಗಳ ಶೇ.90ಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಮಾಂಸಾಹಾರ ಸೇವನೆ ಮಾಡುತ್ತದೆ.

ದಕ್ಷಿಣ ರಾಜ್ಯಗಳ ಪೈಕಿ ಕೇರಳದಲ್ಲಿ ಅತಿ ಹೆಚ್ಚಿನ ಮಾಂಸಾಹಾರ ಸೇವನೆ ಮಾಡುವವರಿದ್ದಾರೆ. ಕೇರಳದಲ್ಲಿ ಮಾಂಸಾಹಾರ ಸೇವನೆಯ ಪ್ರಮಾಣ ಶೇ.99.1ರಷ್ಟಿದೆ. ಪಾಂಡಿಚೇರಿ ರಾಜ್ಯದಲ್ಲಿ ಶೇ. 98.5 ರಷ್ಟು ಮಾಂಸಾಹಾರಿಗಳಿದ್ದರೆ, ತಮಿಳುನಾಡಿನಲ್ಲಿ ಶೇ 97.7, ಆಂದ್ರಪ್ರದೇಶದ ಶೇ 97.3, ತೆಲಂಗಾಣದ ಶೇ.97.3 ರಷ್ಟು ಜನರು ಮಾಂಸಾಹಾರ ಸೇವನೆ ಮಾಡಲಿದ್ದಾರೆ.

ಕರ್ನಾಟಕದಲ್ಲಿ ಶೇ.87 ರಷ್ಟು ಜನರು ಮಾಂಸಾಹಾರಿಗಳಾಗಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ. ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕವೇ ಅತ್ಯಂತ ಕಡಿಮೆ ಮಾಂಸಾಹಾರಿಗಳ ರಾಜ್ಯವಾಗಿರುವುದು ಗಮನಾರ್ಹವಾಗಿದೆ. ಇದೊಂದು ಖಾಸಗಿ ಸಂಸ್ಥೆಯ ವರದಿಯಾಗಿದ್ದು, ಎಷ್ಟರ ಮಟ್ಟಿಗೆ ನಿಖರವಾಗಿದೆ ಎಂಬುವ ಕುರಿತು ಕುತೂಹಲವಿದೆ.


Share It

You cannot copy content of this page