ಸಿನಿಮಾ ಸುದ್ದಿ

ಬೆಂಗಳೂರು ನಿಮ್ರಾತೃ ಕೆಂಪೇಗೌಡರ ಪಾತ್ರದಲ್ಲಿ ಡಾಲಿ ಧನಂಜಯ

Share It


ಬೆಂಗಳೂರು: ಬೆಂಗಳೂರು ನಿಮಾತೃ, ದೂರದೃಷ್ಟಿಯ ಮಹಾ ನಾಯಕ ಎನಿಸಿಕೊಂಡಿದ್ದ ಕೆಂಪೇಗೌಡರ ಜೀವನ ಚಿರಿತ್ರೆ ಆಧರಿಸಿದ ಐತಿಹಾಸಕ ಚಿತ್ರದಲ್ಲಿ ಡಾಲಿ ಧನಂಜಯ ನಟಿಸಲಿದ್ದಾರೆ.

ಈ ಚಿತ್ರವೊಂದು ಐತಿಹಾಸಿಕ ಮೈಲುಗಲ್ಲಾಗಲಿದ್ದು, ಕೆಂಪೇಗೌಡ ನಾಡು ನುಡಿಯ ಕಾಳಜಿ, ಹೋರಾಟಗಳೆಲ್ಲವನ್ನು ಒಳಗೊಂಡ ಕತೆಯಾಗಿದ್ದು, ಇಂದು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಅದರಲ್ಲಿ ಡಾಲಿ, ಕೆಂಪೇಗೌಡರಾಗಿ ಕಾಣಿಸಿಕೊಂಡಿದ್ದಾರೆ.

ಟಿ.ಎಸ್. ನಾಗಾಭರಣ ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಕತೆಯ ಕ್ರೋಢೀಕರಣದಲ್ಲಿ ಕವಯತ್ರಿ ಪ್ರತಿಭಾ ನಂದಕುಮಾರ್ ಕೈ ಜೋಡಿಸಿದ್ದಾರೆ. ಡಾ. ಎಂ.ಎನ್. ಶಿವರುದ್ರಪ್ಪ ಹಾಗೂ ಶುಭಂ ಗುಂಡಾಲ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ವಾಸುಕಿ ವೈಭವ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪನ್ನಗ ಭರಣ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಪ್ರಯೋಗಾತ್ಮಕ ಚಿತ್ರಗಳಲ್ಲಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಇದೀಗ ಅದರ ಸಾಲಿಗೆ ಐತಿಹಾಸಿಕ ಚಿತ್ರವೊಂದು ಸೇರಿಕೊಳ್ಳಲಿದೆ. ಇಂದು ವಿಶ್ವದಲ್ಲೇ ಸಿಲಿಕಾನ್ ವ್ಯಾಲಿ ಎನಿಸಿಕೊಳ್ಳುವ ಬೆಂಗಳೂರು ಮಹಾನಗರಕ್ಕೆ ಐನೂರು ವರ್ಷಗಳ ಹಿಂದೆಯೇ ಅಡಿಪಾಯ ಹಾಕಿದ ಅಭೂತಪೂರ್ವ ನಾಯಕನ ಜತೆಯನ್ನು ತೆರೆಯ ಮೇಲೆ ತರುವ ಪ್ರಯತ್ನದ ಭಾಗವಾಗಿ ಡಾಲಿ ಕಾಣಿಸಿಕೊಂಡಿದ್ದಾರೆ.


Share It

You cannot copy content of this page