ಹೊಸಪೇಟೆ: ತುಂಗಭದ್ರಾ ಡ್ಯಾಂನ ಕಟ್ ಆಗಿದ್ದ ಗೇಟ್ ನ ಬದಲಿ ಗೇಟ್ ಅಳವಡಿಕೆಯ ಮೊದಲ ಹಂತದ ಕಾರ್ಯ ಸಕ್ಸಸ್ ಆಗಿದೆ.
ಮೊದಲ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿ ನಡೆದ ಪರಿಣಾಮ ಸುಮಾರು ನಾಲ್ಕು ಅಡಿ ನೀರಿನ ಹರಿಯುವಿಕೆ ಕಡಿಮೆಯಾಗಲಿದೆ. ನಾಳೆ ಸಂಜೆ 4 ಗಂಟೆ ವೇಳೆ ಉಳಿದ ಮೂರು ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಪೂರ್ಣವಾಗಲಿದೆ.
ಇದರಿಂದ ಸುಮಾರು 70 ಟಿಎಂಸಿ ನೀರು ಉಳಿಸಿದಂತಾಗಲಿದೆ. ಡಾ.ಕನ್ನಯ್ಯ ನಾಯ್ಡು ಮತ್ತು ತಂಡದ ಕಾರ್ಯಕ್ಕೆ ಸ್ಥಳದಲ್ಲಿದ್ದ ಸಚಿವ ಶಿವರಾಜ್ ತಂಗಡಗಿ ಸೇರಿ ಎಲ್ಲ ಸಿಬ್ಬಂದಿ ಸಿಹಿ ಹಂಚಿ ಸಂಭ್ರಮಿಸಿದರು.
ನೀರಿನ ಸಂಗ್ರಹವನ್ನು ಉಳಿಸಿಕೊಂಡೇ ಗೇಟ್ ಅಳವಡಿಕೆ ಮಾಡುವ ನಿಟ್ಟಿನಲ್ಲಿ ಸರಕಾರ ಪ್ರಯತ್ನ ನಡೆಸಿತ್ತು. ಇದಕ್ಕಾಗಿ, ಡಾ. ಕನ್ನಯ್ಯ ನಾಯ್ಡು ನೇತ್ರತ್ವದಲ್ಲಿ ಮೂರು ದಿನಗಳಿಂದ ಕಾರ್ಯಾಚರಣೆ ನಡೆದಿತ್ತು. ಎರಡು ದಿನಗಳಲ್ಲಿ ಗೇಟ್ ಅಳವಡಿಸಲ ಕಾರ್ಯ ಪೂರ್ಣಗೊಳಿಸುವ ಭರವಸೆಯನ್ನು ತಂಡ ನೀಡಿತ್ತು.
updating…

