ಸುದ್ದಿ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಸಹಾಯವಾಣಿ ಸ್ಥಾಪನೆ

Share It

ಬೆಂಗಳೂರು:ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026ರ ಸಂಬಂಧ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 07 ವಿಧಾನಸಭಾ ಕ್ಷೇತ್ರಗಳಾದ 150-ಯಲಹಂಕ, 152-ಬ್ಯಾಟರಾಯನಪುರ, 153-ಯಶವಂತಪುರ, 155-ದಾಸರಹಳ್ಳಿ, 174-ಮಹದೇವಪುರ, 176-ಬೆಂಗಳೂರು ದಕ್ಷಿಣ ಮತ್ತು 177-ಆನೇಕಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲುಗಳ  ನಿವಾರಣೆಗಾಗಿ ಹಾಗೂ ಸ್ಪಷ್ಠೀಕರಣಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಕೆ.ಜಿ.ರಸ್ತೆ, ಬೆಂಗಳೂರು ಇಲ್ಲಿ ಕಚೇರಿ ವೇಳೆಯಲ್ಲಿ ಕಾರ್ಯನಿರ್ವಹಿಸಲು ಸಹಾಯವಾಣಿ ಕೇಂದ್ರವನ್ನು  ಸ್ಥಾಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಕಾಂತರಾಜು ಪಿ.ಎಸ್ ಅವರು ತಿಳಿಸಿದ್ದಾರೆ. 

ಮತದಾರರು/ಸಾರ್ವಜನಿಕರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿ ತಮ್ಮ ಅಹವಾಲುಗಳ ನಿವಾರಣೆಗಾಗಿ ಹಾಗೂ ಸ್ಪಷ್ಠೀಕರಣಕ್ಕಾಗಿ ಸಹಾಯವಾಣಿ/ದೂರವಾಣಿ ಸಂಖ್ಯೆ 080-22967200 ಗೆ ಕರೆ ಮಾಡಬಹುದು ಅಥವಾ ಇ-ಮೇಲ್ adeobangaloreurban@gmail.com ಮೂಲಕ ಸಲ್ಲಿಸಬಹುದು.

ಕಛೇರಿಯ ಸಾಮಾಜಿಕ ಮಾಧ್ಯಮ/ಜಾಲತಾಣಗಳಾದ ಫೇಸ್ ಬುಕ್ -Deputy Commissioner, Bengaluru Urban, ಇನ್ ಸ್ಟಾಗ್ರಾಮ್- dc_bangalore_urban, ಟ್ವಿಟರ್- DC_blrurban, ಮೂಲಕ ಸಲ್ಲಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆಯ  ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share It

You cannot copy content of this page