ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಹೋರಾಟದಲ್ಲಿ ಬಿಜೆಪಿಗೆ ನೈತಿಕ ಜಯ ಸಿಕ್ಕಂತಾಗಿದ್ದು, ರಾಜೀನಾಮಡ ಕೊಡಿಸಿಯೇ ಸಿದ್ದ ಎಂಬ ರಾಜ್ಯಾ ವಿಜಯೇಂದ್ರ ಹೋರಾಟಕ್ಕೆ ಫಲ ಸಿಗಲಿದೆಯೇ?
ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯಪಾಲರು ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಇದೀಗ ಸಿಎಂ ತಮ್ಮ ಸ್ಥಾನಕ್ಕೆ ನೈತಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ. ಒಂದು ವೇಳೆ ರಾಜೀನಾಮೆ ನೀಡದಿದ್ದರೆ, ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದಂತಾಗುತ್ತದೆ.
ಮೇಲ್ನೋಟಕ್ಕೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತಿದ್ದಂತೆ ಸಿಎಂ ರಾಜೀನಾಮೆಯ ಅನಿವಾರ್ಯತೆ ಸೇಷ್ಠಿಯಾಗಿದ್ದು, ಇದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಗೆಲುವು ಎಂದೇ ಹೇಳಬಹುದು.
ಈ ನಡುವೆ ಬಿಜೆಪಿಯಲ್ಲೇ ಒಂದು ಗುಂಪು, ವಿಜಯೇಂದ್ರ ಅವರ ಪಾದಯಾತ್ರೆ ವಿರೋಧಿಸಿ, ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಪರೋಕ್ಷವಾಗಿ ನಿಂತಿತ್ತು. ಜತೆಗೆ, ವಿಜಯೇಂದ್ರ ವಿರುದ್ಧ ಹೈಕಮಾಂಡ್ ಗೆ ದೂರುಗಳ ಸುರಿಮಳೆ ಸುರಿಸಿದ್ದರು. ಆದರೂ, ಹೈಕಮಾಂಡ್ ತಲೆ ಕೆಡಿಸಿಕೊಳ್ಳದಿರುವುದು ವಿಜಯೇಂದ್ರಗೆ ಸಿಕ್ಕಿದ ವಿಜಯ ಎನ್ನಬಹುದು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ, ಅಥವಾ ಬಿಡಲಿ ರಾಜ್ಯಪಾಲರ ನಿರ್ಧಾರ, ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ನಿರ್ಣಯವಂತೂ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತ್ರವಲ್ಲ, ಕಾಂಗ್ರೆಸ್ ಗೆ ಕೂಡ ರಾಜಕೀಯವಾಗಿ ಬಹುದೊಡ್ಡ ಹಿನ್ನಡೆ.

