ಪಾವಗಡ: ಸಿಡಿಲಿಗೆ ಎಮ್ಮೆ ಸುಟ್ಟಿ ಕರಕಲಾಗದ ಘಟನೆ ತಾಲೂಕಿನ ಕೊಟ್ಟಗುಡ್ಡ ಗ್ರಾಮದಲ್ಲಿ ಸಂಭವಿಸಿದೆ
ಸಿಡಿಲಿಗೆ ಒಂದು ಎಮ್ಮೆ ಸುಟ್ಟಿಹೊಗಿ ಮೂರು ಜಾನುವಾರುಗಳಿಗೆ ಗಾಯಗಳು ಸಂಭವಿಸಿದೆ ಹಾಗೂ ಇಬ್ಬರ ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿ ಕೂದಲೆಳೆಯ ಅಂತರದಿಂದ ಪ್ರಾಣೋಪಾಯದಿಂದ ಪಾರಾಗಿದ್ದಾರೆ.
ಪಾವಗಡ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಗುರುವಾರ ಕರಿಯಪ್ಪ ಎಂಬವರ ಜಮೀನಿನಲ್ಲಿ ರಾತ್ರಿ ಮಳೆ ಬರುವ ಸಮಯದಲ್ಲಿ ಗುಡುಗು ಸಿಡಿಲು ಬಡಿದು ನಾಲ್ಕು ಜಾನುವಾರು ಗಾಯಗೊಂಡಿದ್ದು ಒಂದು ಜಾನುವಾರು ಸಂಪೂರ್ಣವಾಗಿ ಸುಟ್ಟ ಹೋಗಿದೆ. ಈ ಆವಾಘಡದಿಂದ ಇಬ್ಬರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. ಗುಡಿಸಲು ಸಂಪೂರ್ಣವಾಗಿ ಭಸ್ಮವಾಗಿದೆ.
ಕರಿಯಪ್ಪ ಎಂಬುವರು ಊರಿನ ಹೊರಗೆ ತೋಟದ ಮನೆಯಲ್ಲಿ ವಾಸವಾಗಿದ್ದಾರೆ ಎಂಬುದು ತಿಳಿದುಬಂದಿದೆ. ಸ್ಥಳಕ್ಕೆ ಪಶು ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ : ಇಮ್ರಾನ್ ಉಲ್ಲಾ. ಪಾವಗಡ