ಬೆಂಗಳೂರು: ಎಸ್‌ಐಟಿ ವಶದಲ್ಲಿರುವ ಹೊಳೆನರಸೀಪುರ ಬಿಜೆಪಿ ಮುಖಂಡ ದೇವರಾಜೇಗೌಡ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಎಸ್‌ಐಟಿ ವಶದಲ್ಲಿದ್ದ ವೇಳೆ ನ್ಯಾಯಾಲಯಕ್ಕೆ ಹಾಜರಾಗಿದ್ದ ದೇವರಾಜೇಗೌಡ, ಮಾಧ್ಯಮಗಳಿಗೆ ಸ್ಫೋಟಕ ಹೇಳಿಕೆ ನೀಡಿದ್ದು, ಮೋದಿ, ಶಾ ಮತ್ತು ಕುಮಾರಸ್ವಾಮಿ ಅವರ ಹೆಸರು ಕೆಡಿಸುವ ಸಲುವಾಗಿ ನನಗೊಂದು ದೊಡ್ಡ ಆಫರ್ ಕೊಟ್ಟಿದ್ದರು, ಅದು ಸಕ್ಸಸ್ ಆಗದ ಕಾರಣಕ್ಕೆ ನನ್ನನ್ನು ಪೆನ್ ಡ್ರೈವ್ ಕೇಸಲ್ಲಿ ಲಾಕ್ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿಯೇ ಪೆನ್ ಡ್ರೈವ್ ಹಂಚಿಕೆ ಮಾಡಿದ್ದಾರೆ ಎಂದು ಹೇಳಬೇಕು ಎಂದು ನನಗೆ ಹೇಳಿದ್ದರು. ನಾಲ್ವರು ಸಚಿವರ ಒಂದು ಕಮಿಟಿ ನೇಮಕ ಮಾಡಿ, ಇದನ್ನೆಲ್ಲ ಹ್ಯಾಂಡಲ್ ಮಾಡಲು ಬಿಟ್ಟಿದ್ದರು. ಪ್ರಜ್ವಲ್ ರೇವಣ್ಣ ಡ್ರೈವರ್ ಕಾರ್ತಿಕ್‌ನನ್ನು ಕರೆಸಿಕೊಂಡು, ಪೆನ್ ಡ್ರೈವ್ ಮಾಹಿತಿ ಪಡೆದುಕೊಂಡಿದ್ದರು ಎಂದು ಆರೋಪ ಮಾಡಿದ್ದಾರೆ.
ನಾನು ಜೈಲಿನಿಂದ ಹೊರಗೆ ಬಂದ ದಿನವೇ ಸರಕಾರ ಪತನವಾಗಲಿದೆ, ನನ್ನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಏನೂ ಸಿಕ್ಕಿಲ್ಲ. ನಾನು ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟಿದ್ದೇನೆ ಎಂದು ದೇವರಾಜೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿಯನ್ನು ಸಂಧಾನಕ್ಕೆ ಕಳುಹಿಸಿದ್ದರು. ಆತನ ಕೈಲಿ ೫ ಕೋಟಿ ಹಣವನ್ನು ಕೊಟ್ಟು ಕಳುಹಿಸಿದ್ದರು. 100 ಕೋಟಿ ಕೊಟ್ಟು, ಬಿಜೆಪಿ, ಮೋದಿ, ಮತ್ತು ಕುಮಾರಸ್ವಾಮಿ ಹೆಸರು ಕೆಡಿಸುವ ಸಾಹಸಕ್ಕೆ ಕೈ ಹಾಕಿದ್ದರು ಎಂದು ದೇವರಾಜೇಗೌಡ ಆರೋಪ ಮಾಡಿದ್ದಾರೆ.
Updated……………