ಅಪರಾಧ ಸುದ್ದಿ

ಬೆಂಗಳೂರು-ಹೊಸೂರು ರಾಷ್ಟೀಯ ಹೆದ್ದಾರಿಯಲ್ಲಿ ಕುಡುಕನ ಮಹಾಶಯನ ಕ್ವಾಟ್ಲೆ

Share It

ಆನೇಕಲ್: ಬೆಂಗಳೂರು-ಹೊಸೂರು ರಾಷ್ಟೀಯ ಹೆದ್ದಾರಿಯಲ್ಲಿ ಕಂಠಪೂರ್ತಿ ಕುಡಿದಿದ್ದ ಯುವಕನೊಬ್ಬ ರಸ್ತೆಯಲ್ಲಿ ವಾಹನಗಳಿಗೆ ಅಡ್ಡಗಟ್ಟಿ ಗಂಟೆಗಟ್ಟಲೇ ಕ್ವಾಟ್ಲೆ ಕೊಟ್ಟ ಕಾರಣ ಸಂಚಾರದಟ್ಟಣೆ ಉಂಟಾದ ಘಟನೆ ನಡೆದಿದೆ.

ಆನೇಕಲ್ ತಾಲೂಕಿನ ಚಂದಾಪುರದ ತಮಿಳುನಾಡು-ಹೊಸೂರು ಗಡಿಯಲ್ಲಿ ಕಂಠಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ, ಸಿಕ್ಕಸಿಕ್ಕ ವಾಹನಗಳಿಗೆಲ್ಲ ಅಡ್ಡ ಬಂದು ನಿಂತು ಎಷ್ಟೊತ್ತಾದರೂ, ಅಲ್ಲಿಂದ ಅಲುಗಾಡುತ್ತಿರಲಿಲ್ಲ.

ಹೊಸೂರು-ಬೆಂಗಳೂರು ನಡುವೆ ಓಡಾಡುವ ಅನೇಕ ಲಾರಿ ಚಾಲಕರು, ಕಾರು ಚಾಲಕರು ಕುಡುಕನ ಅವಾಂತರಕ್ಕೆ ಬೇಸ್ತು ಬಿದ್ದರು. ಆತನನ್ನು ರಸ್ತೆಯಿಂದ ಹೊರಗೆ ಕರೆತರಲು ಅನೇಕ ಯುವಕರು, ಬೈಕ್ ಸವಾರರು ಪ್ರಯತ್ನಪಟ್ಟರೂ, ಆತ ರಸ್ತೆಯಿಂದ ಆಚೆಗೆ ಬರುತ್ತಿರಲಿಲ್ಲ.

ಕೆಲವು ಯುವಕರು ಆತನನ್ನು ರಸ್ತೆಯಿಂದ ಆಚೆಗೆ ತಂದು ಬಿಟ್ಟು ಹೋದರು. ಅವರು ಹೋಗುತ್ತಿದ್ದಂತೆ ಆತ ಮತ್ತೇ ರಸ್ತೆಗಿಳಿದು ತನ್ನ ಕಾರ್ಯಯನ್ನು ಯಥಾಪ್ರಕಾರ ಮುಂದುವರಿಸಿದ್ದ, ಇದರಿಂದ ಸುಮಾರು ಎರಡು ಗಂಟೆ ಕಾಲ ರಸ್ತೆಯಲ್ಲಿ ಓಟಾಡುತ್ತಿದ್ದ ವಾಹನ ಸವಾರರಿಗೆ ಕಿರಿಕಿರಿಯಾಗಿದ್ದು ಸುಳ್ಳಲ್ಲ.


Share It

You cannot copy content of this page