ಆರ್‌ಸಿಬಿಯ ಸಾಂಘಿಕ ಪ್ರದರ್ಶನಕ್ಕೆ ಒಲಿದ ಸತತ ಐದನೇ ಗೆಲುವು
ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡ ಆರ್‌ಸಿಬಿ ತಂಡ
ಬೆAಗಳೂರು: ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್‌ಗಳಿಂದ ಮಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸತತ ಐದನೇ ಗೆಲುವಿನ ಮೂಲಕ ಪ್ಲೇಆಪ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 187 ರನ್‌ಗಳ ಗುರಿಯನ್ನು ನೀಡಿತ್ತು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇನು ಬಹುದೊಡ್ಡ ಟಾರ್ಗೆಟ್ ಅಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಆರ್‌ಸಿಬಿ ಬೌಲರ್‌ಗಳು ತಮ್ಮ ಸಾಂಘಿಕ ಬೌಲಿಂಗ್ ಪ್ರದರ್ಶನವನ್ನು ಮುಂದುವರಿಸಿದದು. ಇದರ ಪರಿಣಾಮವಾಗಿ ಆರ್‌ಸಿಬಿ 47 ರನ್‌ಗಳಿಂದ ಭರ್ಜರಿಯಾಗಿ ಗೆಲವು ಸಾಧಿಸಿತು. ಡೆಲ್ಲಿ ತಂಡ 140 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿಗೆ ಆರಂಭ ಉತ್ತಮವಾಗಿರಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಕೋಹ್ಲಿ ಮತ್ತು ಪಾಪ್ ಡುಪ್ಲಿಸಿಸ್ ಜತೆಯಾಟ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ವಿಲ್ ಜಾಕ್ಸ್, ರಜತ್ ಪಟೇದಾರ್ ಮತ್ತು ಕೆಮರಾನ್ ಗ್ರೀನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ವಿಲ್ ಜಾಕ್ಸ್ 41 ರನ್‌ಗಳಿಸಿ ಔಟಾದರೆ, ರಜತ್ ಪಟೀದಾರ್ ಭರ್ಜರಿ ಅರ್ಧಶತಕ ಸಿಡಿಸಿದರು. ಆ ಮೂಲಕ ಸರಣಿಯಲ್ಲಿ ಐದನೇ ಅರ್ಧಶತಕ ಸಿಡಿಸಿದರು. ಕೊನೆಯವರೆಗೂ ಬ್ಯಾಟಿಂಗ್ ನಡೆಸಿದ ಗ್ರೀನ್ 32 ರನ್‌ಗಳಿಸಿ ಔಟಾಗದೆ ಉಳಿದರು.
ಡೆಲ್ಲಿ ಪರ ಅಕ್ಷರ್ ಪಟೇಲ್ ಅರ್ಧಶತಕ ಸಿಡಿಸಿದ್ದು ಬಿಟ್ಟರೆ, ಮತ್ಯಾವ ಬ್ಯಾಟರ್ ನಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ. ಬೌಲಿಂಗ್‌ನಲ್ಲಿ ಡೆಲ್ಲಿ ಕಲೀಲ್ ಅಹಮದ್ ಮತ್ತು ರಸಿಕ್ ಸಲಾಂ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ, ಆರ್‌ಸಿಬಿ ಪರ ಯಶ್ ದಯಾಳ್ 3 ವಿಕೆಟ್ ಪಡೆದರೆ, ಲೂಕಿ ಪರ್ಗ್ಯುಸನ್ ಎರಡು ವಿಕೆಟ್ ಪಡೆದರು. ಆರ್‌ಸಿಬಿಯ ಪೀಲ್ಡಿಂಗ್ ಕೂಡ ಅತ್ಯುತ್ತಮವಾಗಿತ್ತು. ಆರ್‌ಸಿಬಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಆ ಪಂದ್ಯವೇ ಪ್ಲೇ ಆಫ್ ರೇಸ್ ಅಂತಿಮಗೊಳಿಸುವ ಪಂದ್ಯವಾಗಬಹುದು.
ರಾಯಲ್ ಚಾಲೆಂಜರ್ಸ್
ಅಕ್ಷರ್ ಪಟೇಲ್ ೫೭(೩೯)
ಶಾಯಿ ಹೋಪ್ ೨೯(೨೩)
ಯಶ್ ದಯಾಳ್ ೨೦/೩
ಡೆಲ್ಲಿ ಕ್ಯಾಪಿಟಲ್ಸ್
ರಜತ್ ಪಾಟೀದಾರ್ ೫೨(೩೨)
ವಿಲ್ ಜಾಕ್ಸ್ ೪೧(೨೯)
ಕಲೀಲ್ ಅಹಮದ್ ೩೧/೨