ಬೆಂಗಳೂರು: ಕಳೆದ ಒಂದು ವಾರದಿಂದ ಜೈಲಿನಲ್ಲಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಸೋಮವಾರ ಜಾಮೀನು ಮೂಲಕ ಅವರ ಜೈಲುವಾಸ ಅಂತ್ಯವಾಗುತ್ತದೆಯಾ?
ಲೈAಗಿಕ ದಔರ್ಜನ್ಯ ಆರೋಪದಲ್ಲಿ ಮಾಜಿ ಸಚಿವ ರೇವಣ್ಣ ಅವರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಅವರನ್ನು ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಹೀಗಾಗಿ, ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿದೆ.
ಈ ನಡುವೆ ರೇವಣ್ಣ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದು, ಸೋಮುವಾರ ರೇವಣ್ಣ ಅವರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.
ರೇವಣ್ಣ ಪ್ರಕರಣದಲ್ಲಿ ನೇರವಾಗಿ ಎಲ್ಲಿಯೂ ಭಾಗಿಯಾಗಿಲ್ಲ, ಅವರು ಜನಪ್ರತಿನಿಧಿಯಾದ ಕಾರಣಕ್ಕೆ ವಿಚಾರಣೆಯನ್ನು ತಪ್ಪಿಸಿಕೊಂಡು ಎಲ್ಲಿಯೂ ಹೋಗುವುದಿಲ್ಲ. ಪೊಲೀಸರು ವಿಚಾರಣೆಗೆ ಕರೆದಾಗ ವಿಚಾರಣೆಗೆ ಹಾಜರಾಗುತ್ತಾರೆ. ಹೀಗಾಗಿ, ಜಾಮೀನು ನೀಡಬೇಕು ಎಂಬುದು ರೇವಣ್ಣ ಅವರ ಪರ ವಾದವಾಗಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಎಸ್‌ಐಟಿ ಪರ ವಕೀಲರು, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ, ಪೊಲೀಸರಿಂದ ತಪ್ಪಿಸಿಕೊಂಡು, ವಿದೇಶಕ್ಕೆ ಹೋಗಿದ್ದಾರೆ. ಹೀಗಾಗಿ, ರೇವಣ್ಣನಿಗೆ ಬೇಲ್ ನೀಡಿದರೆ, ಅವರು ಕೂಡ ಪಂಲಾಯನ ಮಾಡಬಹುದು ಎಂಬ ವಾದವನ್ನು ವಕೀಲರು ಮಂಡಿಸಬಹುದು.
ಎಸ್‌ಐಟಿ ಪರ ವಕೀಲರು ರೇವಣ್ಣ ಅವರಿಗೆ ಜಾಮೀನು ನೀಡದಂತೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಪ್ರಜ್ವಲ್ ಬಂಧನದವರೆಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬರಬಹುದು ಎಂದು ಹೇಳಲಾಗುತ್ತದೆ.
ಹೀಗಾದಲ್ಲಿ, ಇನ್ನೂ ಏಳು ದಿನಗಳ ಕಾಲ ಜೈಲಿನಲ್ಲಿಯೇ ರೇವಣ್ಣ ಕಾಲಕಳೆಯಬೇಕಾಗುತ್ತದೆ. ಈಗಾಗಲೇ, ಕಳೆದ ಮೂರು ದಿನದಿಂದ ಯಾರ ಭೇಟಿಗೂ ಅವಕಾಶವಿಲ್ಲದೆ ರೇವಣ್ಣ ಮಾನಸಿಕವಾಗಿ ಜರ್ಜರಿತವಾಗಿದ್ದಾರೆ ಎನ್ನಲಾಗಿದೆ. ನಾಳೆಯೂ ಜಾಮೀನು ಸಿಗದಿದ್ದರೆ, ರೇವಣ್ಣ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.