ಬರೇಲಿ(ಉತ್ತರ ಪ್ರದೇಶ): ಮಕ್ಕಳು ಆಟವಾಡಿ ನಲಿಯುವ ಗಾಳಿಪಟ, ಅದೇ ಮಕ್ಕಳ ಪಾಲಿಗೆ ಮೃತ್ಯುವಾಗಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿರುವ ಘಟನೆಯಲ್ಲಿ ಗಾಳಿಪಟ ಹಿಡಿಯಲು ಹೋಗಿ ರೈಲು ಡಿಕ್ಕಿಯಾಗಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬರೇಲಿಯ ಸಿಬಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಪಸರ್ೋನಾ ಗ್ರಾಮದ ಫೈಜ್ (8) ಮತ್ತು ಮಹೇಶ್ಪುರ ಗ್ರಾಮದ ಸಾಜಿದ್ (12) ಮೃತಪಟ್ಟ ಬಾಲಕರು.
ಸಿಬಿಗಂಜ್ನ ಮಿಲಾಕ್ ರೋಥಾ ಗ್ರಾಮದಲ್ಲಿ ಭಾನುವಾರ ಸಂಜೆ ಘಟನೆ ನಡೆಯಿತು. ಮಿಲಾಕ್ ರೋಥಾ ಗ್ರಾಮದ ಸಮೀಪದ ರೈಲು ಮಾರ್ಗದ ಸಮೀಪದಲ್ಲಿ ಫೈಜ್ ಮತ್ತು ಸಾಜಿದ್ ಆಟವಾಡುತ್ತಿದ್ದರು. ಇವರೊಂದಿಗೆ ಸುತ್ತಮುತ್ತಲಿನ ಇತರ ಮಕ್ಕಳೂ ಕೂಡಾ ಗಾಳಿಪಟ ಹಾರಿಸುತ್ತಿದ್ದರು. ಹಾರಿಬಿಟ್ಟ ಗಾಳಿಪಟಗಳನ್ನು ಮಕ್ಕಳು ಹಿಡಿಯಲು ಓಡಿ ಹೋಗಿದ್ದಾರೆ. ಗಾಳಿಪಟದ ಹಿಂದೆ ಓಡುತ್ತಾ ಫೈಜ್ ಮತ್ತು ಸಾಜಿದ್ ರೈಲು ಮಾರ್ಗ ಪ್ರವೇಶಿಸಿದ್ದಾರೆ.
ಈ ಸಂದರ್ಭದಲ್ಲಿ ಮಕ್ಕಳ ಸಂಪೂರ್ಣ ಗಮನ ಗಾಳಿಪಟದ ಮೇಲಿತ್ತು. ಹಳಿ ರೈಲು ಬರುವುದನ್ನು ಗಮನಿಸಲಿಲ್ಲ. ಪರಿಣಾಮ, ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ