ಬೆಂಗಳೂರು: ಇಡೀ ವಿಶ್ವವನ್ನೇ ನಡುಗಿಸಿದ್ದ ಕರೋನಾ ಮಹಾಮಾರಿ ಇದೀಗ ಮತ್ತೊಂದು ಸುತ್ತಿನ ಆರ್ಭಟಕ್ಕೆ ಸಜ್ಜಾಗುತ್ತಿಎಯೇ ಎಂಬ ಅನುಮಾನ ಮೂಡುತ್ತಿದೆ.
ಸಿಂಗಾಪುರ್‌ನಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕರೋನಾ ಸಾಂಕ್ರಾಮಿಕದ ಭೀತಿ ಸಿಂಗಾಪುರದಲ್ಲಿ ಹೆಚ್ಚಾಗುತ್ತಿದೆ. ಶೇ.60 ರಷ್ಟು ಸೋಂಕಿತರು ಹೆಚ್ಚಳವಾಗುತ್ತಿದ್ದಾರೆ.
ಮೇ 5 ರಿಂದ ಈವರೆಗೆ ಸಿಂಗಾಪೂರದಲ್ಲಿ 25900 ಜನ ಸೋಂಕಿತರು ಕಂಡುಬAದಿದ್ದಾರೆ. ಸೋಂಕಿತರ ಸಂಖ್ಯೆ ವಾರದಿಂದ ವಾರಕ್ಕೆ ದ್ವಿಗುಣವಾಗುತ್ತಿದೆ. ಹೀಗಾಗಿ, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆದೇಶ ನೀಡಿದೆ.