ಬೆಂಗಳೂರು: ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ವಿರುದ್ಧ ಗೆಲುವು ಸಾಧಿಸಿದ್ದು, ಪಂದ್ಯದ ಗೆಲುವು ಸಿಕ್ಕಿದ್ದೊಂದು ರೋಚಕ ಅನುಭವ
ಟಾಸ್ ಸೋತರು ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಲು ಬಂತು. ಮಳೆಯ ಭೀತಿ ನಡುವೆಯೇ ಇನ್ಸಿಂಗ್ ಆರಂಭಿಸಿ, ಕೋಹ್ಲಿ ಮತ್ತು ಡುಪ್ಲೆಸಿಸ್ ಉತ್ತಮ ಆರಂಭ ನೀಡಿದರು. ಜತೆಗೆ ರಜತ್ ಪಟೀದಾರ್, ಕ್ಯಾಮೆರಾನ್ ಗ್ರೀನ್ ಉತ್ತಮ ಬ್ಯಾಟಿಂಗ್ ನಡೆಸಿ, 218 ರನ್‌ಗಳ ಬೃಹತ್ ಮೊತ್ತ ಪೇರಿಸಿದರು.
ಚೆನ್ನೈ ಗೆಲುವಿಗೆ 219 ರನ್‌ಗಳ ಅವಶ್ಯಕತೆಯಿತ್ತಾದರೂ, ಪ್ಲೇ ಆಪ್ ರೇಸ್‌ಗೆ 201 ರನ್‌ಗಳನ್ನು ಗಳಿಸಿದ್ದರೆ ಸಾಕಿತ್ತು. ಹೀಗಾಗಿ, ಆರ್‌ಸಿಬಿಗೆ ಚೆನ್ನೈ ತಂಡವನ್ನು 200 ರನ್‌ಗಳಿಗೆ ಕಟ್ಟಿಹಾಕುವ ಅನಿವಾರ್ಯತೆ ಇತ್ತು. ಮೊದಲ ಬಾಲ್‌ನಲ್ಲೇ ಮ್ಯಾಕ್ಸ್ವೆಲ್ ಯಶಸ್ಸು ತಂದುಕೊಟ್ಟು, ಋತುರಾಜ್ ಗಾಯಕ್ವಾಡ್ ಅವರನ್ನು ಪೆವಲಿಯನ್‌ಗೆ ಕಳುಸಹಿದರು.
ರಚಿನ್ ರವೀಂದ್ರ ಉತ್ತಮ ಆಟವಾಡುವ ಮೂಲಕ 37 ಎಸೆತಗಳಲ್ಲಿ 61 ರನ್‌ಗಳಿಸಿದರೆ, ಅಜಿಂಕ್ಯಾ ರಹಾನೆ ೨೨ ಎಸೆತಗಳಲ್ಲಿ 33 ರನ್‌ಗಳಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ರವೀಂದ್ರ ಜಡೇಜಾ ಔಟಾಗದೆ 42 ರನ್‌ಗಳಿಸಿ, ಆರ್‌ಸಿಬಿ ಪಾಲಿಗೆ ಅಪಾಯಕಾರಿಯಾಗಿಯೇ ಉಳಿದಿದ್ದರು.
ಕೊನೆಯ ಓವರ್ ಥ್ರಿಲ್ಲರ್ !
ಕೊನೆಯ ಓವರ್‌ನಲ್ಲಿ ಪ್ಲೇ ಆಫ್ ಪ್ರವೇಶಕ್ಕೆ ಚೆನ್ನೈ ತಂಡ 16 ರನ್‌ಗಳನ್ನು ಗಳಿಸಬೇಕಿತ್ತು. ಯಶ್ ದಯಾಳ್ ಅವರನ್ನು ನಂಬಿದ ನಾಯಕ ಅವರ ಕೈಗೆ ಚೆಂಡು ನೀಡಿದರು. ಆದರೆ, ಮೊದಲ ಬಾಲ್ ಅನ್ನೇ ದೋನಿ, ಸ್ಟೇಡಿಯಂನಿAದ ಆಚೆಗಟ್ಟಿದರು. ಇನ್ನು ಐದು ಎಸೆತಗಳಲ್ಲಿ 10 ರನ್‌ಗಳ ಅವಶ್ಯಕತೆಯಿತ್ತು. ಆಗ ಎರಡನೇ ಬಾಲ್‌ನಲ್ಲಿ ದೋನಿ ಅವರನ್ನು ಔಟ್ ಮಾಡುವ ಮೂಳಕ ಮತ್ತೇ ಆಸೆ ಚಿಗುರುವಂತೆ ಮಾಡಿದರು.
ದೋನಿ ಔಟಾದ ನಂತರ ಕ್ರೀಸಿಗೆ ಬಂದ ಶಾರ್ದೂಲ್ ಠಾಕೂರ್‌ಗೆ ಮೊದಲ ಬಾಲ್‌ನಲ್ಲಿ ಯಾವುದೇ ರನ್ ಕೊಡದೆ ದಯಾಳ್, ಗೆಲುವಿನ ನಿರೀಕ್ಷೆ ಹೆಚ್ಚಿಸಿದರು. ನಾಲ್ಕನೇ ಎಸೆತದಲ್ಲಿ ಒಂದು ರನ್ ಗಳಿಸಿ, ಜಡೇಜಾಗೆ ಸ್ಟ್ರೈಕ್ ನೀಡುತ್ತಿದ್ದಂತೆ ಚೆನ್ನೈಗೆ ಮತ್ತೊಮ್ಮೆ ಗೆಲುವಿನ ನಿರೀಕ್ಷೆ ಹೆಚ್ಚಿತ್ತು.
ಎರಡು ಎಸೆತಗಳಲ್ಲಿ ಹತ್ತು ರನ್ ಅವಶ್ಯಕತೆ ಇತ್ತಾದರೂ, ಜಡೇಜಾ ಕ್ರೀಸ್‌ನಲ್ಲಿದ್ದ ಕಾರಣ ನಿರೀಕ್ಷೆ ಜೋರಾಗಿಯೇ ಇತ್ತು. ಆದರೆ, ಕೊನೆಯ ಎರಡು ಎಸೆತಗಳಲ್ಲಿಯೂ ಯಾವುದೇ ರನ್ ನೀಡದ ಯಶ್ ದಯಾಳ್ ಯಶಸ್ವಿ ಬೌಲರ್ ಎನಿಸಿಕೊಂಡರು. ಆರ್‌ಸಿಬಿ ಆಟಗಾರರು ಮೈದಾನದ ತುಂಬಾ ಕುಣಿದು ಕುಪ್ಪಳಿಸಿದರು.