ಬೆಂಗಳೂರು: ಗೆಲ್ಲಲೇಬೇಕಾದ ಪಂದ್ಯದಲ್ಲಿ ಭರ್ಜರಿ ಗೆಲುವಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಪ್ ಪ್ರವೇಶಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ೨೭ ರನ್‌ಗಳ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ಐಪಿಎಲ್ ಪ್ಲೇ ಆಪ್ ಪ್ರವೇಶಿಸಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ೨೦ ಓವರ್‌ಗಳಲ್ಲಿ ೨೧೮ ರನ್‌ಗಳ ಟಾರ್ಗೆಟ್ ನೀಡಿತ್ತು.
ಭರ್ಜರಿ ಬ್ಯಾಟಿಂಗ್ ಆರಂಭಿಸಿದ ಡುಪ್ಲೆಸಿಸ್ ಮತ್ತು ವಿರಾಟ್ ಕೋಹ್ಲಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದರು. ವಿರಾಟ್ ಕೋಹ್ಲಿ ೪೭ ರನ್ ಗಳಿಸಿದರೆ, ಪಾಪ್ ಡುಪ್ಲೆಸಿಸ್ ೫೨ ರನ್ ಗಳಿಸಿದರು. ಅಂತಿಮ ಓವರ್‌ಗಳಲ್ಲಿ ರಜತ್ ಪಾಟೀದಾರ್ ಮತ್ತು ಕ್ಯಾಮರಾನ್ ಗ್ರೀನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ೨೧೮ ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಬೃಹತ್ ಮೊತ್ತ ಬೆನ್ನತ್ತಿದ ಚೆನ್ನೆöÊಗೆ ಮೊದಲ ಬಾಲ್‌ನಲ್ಲೇ ಗ್ಲೇನ್ ಮ್ಯಾಕ್ಸ್ವೆಲ್ ಶಾಕ್ ನೀಡಿದರು. ನಾಯಕ ಋತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟಾದರೆ, ರಚಿನ್ ರವೀಂದ್ರಾ ೬೧ ರನ್‌ಗಳೊಂದಿಗೆ ಅಜಿಂಕ್ಯಾ ರಹಾನೆ ಜತೆ ಸೇರಿ ಉತ್ತಮ ಜತೆಯಾಟ ನಡೆಸಿದರು. ಅಂತಿಮವಾಗಿ ಮಹೇಂದ್ರ ಸಿಂಗ್ ದೋನಿ ಮತ್ತು ಜಡೇಜಾ ಗೆಲುವಿನ ದಡಕ್ಕೆ ತಂಡವನ್ನು ತಂದರಾದರು, ಆರ್‌ಸಿಬಿ ಬೌಲರ್‌ಗಳ ನಿಖರ ದಾಳಿಯ ಎದುರು ನಿರುತ್ತರರಾದರು.