ಯುವಕನ ಮೇಲೆ ದಾಳಿ ನಡೆಸಿದ ಹುಲಿ
ಚಾಮರಾಜನಗರ: ರಾಷ್ಟ್ರೀಯ ಅಭಯಾರಣ್ಯ ಬಂಡೀಪುರದ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ವೃಷಭೇಂದ್ರಪ್ಪ ಎಂಬ ರೈತನ ಬಾಳೆ ತೋಟದಲ್ಲಿ ಶುಕ್ರವಾರ ಮಧ್ಯಾಹ್ನ ಹುಲಿ ಪ್ರತ್ಯಕ್ಷವಾಗಿದೆ.
ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಕ್ಷಣ ಅರಣ್ಯ ಮತ್ತು ಪೊಲೀಸ್ ಇಲಾಖೆಯವರು ಸ್ಥಳಕ್ಕಾಗಮಿಸಿ ಸೆರೆಗೆ ಕಾಯರ್ಾಚರಣೆ ಆರಂಭಿಸಿದರು. ಕಾಯರ್ಾಚರಣೆ ವೇಳೆ ಸುತ್ತಲಿದ್ದ ರೈತರು ಮತ್ತು ಗ್ರಾಮಸ್ಥರನ್ನು ಪೊಲೀಸರು ದೂರ ಕಳುಹಿಸಿದ್ದರು. ಇಲಾಖೆ ಸಿಬ್ಬಂದಿ ಸಿದ್ಧತೆಗಳೊಂದಿಗೆ ಹುಲಿಗೆ ಅರಿವಳಿಕೆ ನೀಡಲು ಮುಂದಾಗಿದ್ದರು. ಆದರೆ ಅರಣ್ಯ ಸಿಬ್ಬಂದಿ ತಂಡ ಬಾಳೆ ತೋಟ ಪ್ರವೇಶಿಸುತ್ತಿದ್ದಂತೆ ಹುಲಿ ಅಲ್ಲಿಂದ ಪಕ್ಕದ ತೋಟಕ್ಕೆ ಓಡಿಹೋಗಿದೆ.
ತೋಟದಿಂದ ತಪ್ಪಿಸಿಕೊಂಡ ಓಡುತ್ತಿದ್ದ ಹುಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಮನು(22) ಎಂಬಾತ ಗಾಯಗೊಂಡಿದ್ದಾನೆ. ಯುವಕನ ತಲೆ ಹಾಗು ಎಡಗೈಗೆ ಹುಲಿ ಪರಚಿದೆ. ಹುಲಿ ಕಾಲಿಗೆ ಗಾಯ ಆಗಿರಬಹುದು ಅಥವಾ ಅನಾರೋಗ್ಯ ಇರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಬಂಡೀಪುರ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ