ಬೆಂಗಳೂರು: ವ್ಯಾಪಾರ ಪರವಾನಗಿ ನವೀಕರಣ ಮಾಡಿಕೊಡಲು ಮಳಿಗೆ ಬಾಡಿಗೆ ಪಡೆದಿರುವ ಮಾಲೀಕರಿಂದ ಎನ್ಒಸಿ ಪಡೆಯಲೇಬೇಕು ಎಂಬ ಒತ್ತಡವನ್ನು ಬಿಬಿಎಂಪಿ ಹಾಕುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ವೆಲ್ವೆಟ್ ಹೆಸರಿನಲ್ಲಿ ಹೋಟೆಲ್ ನಡೆಸುತ್ತಿರುವ ಪಂಚರತ್ನ ಎಂಟರ್ಪ್ರೈಸಸ್ ಸಲ್ಲಿಸಿದ್ದ ಅಜರ್ಿ ವಿಚಾರಣೆ ನಡೆಸಿದ ನ್ಯಾಯಮೂತರ್ಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಪಂಚರತ್ನ ಎಂಟರ್ಪ್ರೈಸಸ್ ಆರಂಭದಲ್ಲಿ ಶುಲ್ಕ ಪಾವತಿಸಿ 2019 ರ ಜುಲೈ 31 ರಂದು ವ್ಯಾಪಾರ ಪರವಾನಗಿ ಪಡೆದುಕೊಂಡಿದೆ. ಆ ಪಾಲುದಾರಿಕೆ ಸಂಸ್ಥೆಯಲ್ಲಿ ಮರುಸ್ಥಾಪನೆಯಾಗಿ, ಬಾಲಾಜಿ ಪೋತರಾಜ್ ಅವರು ಪಾಲುದಾರರಾಗಿ ಸೇರ್ಪಡೆಯಾದರು, ಮತ್ತು ವ್ಯವಸ್ಥಾಪಕ ನಿದರ್ೇಶಕರಾಗಿ ನೇಮಕಗೊಂಡಿದ್ದರು. ಅವರು 2023ರ ಜನವರಿ 6ರಂದು ವ್ಯಾಪಾರ ಪರವಾನಗಿ ನವೀಕರಣಕ್ಕೆ ಅಜರ್ಿ ಸಲ್ಲಿಸಿದ್ದರು.
ಆಗ ಬಿಬಿಎಂಪಿ ಭೂ ಮಾಲೀಕರಿಂದ ಎನ್ಒಸಿ ಪಡೆಯಬೇಕೆಂದು ಸೂಚಿಸಿದ್ದರು. ಆದರೆ, ಬಿಬಿಎಂಪಿ 2023 ರ ಮೇ 30 ರಂದು ಹೋಟೆಲ್ಗೆ ಬೀಗ ಹಾಕಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಾಗ ನ್ಯಾಯಾಲಯ, ಅಜರ್ಿದಾರರ ವ್ಯಾಪಾರ ಪರವಾನಗಿ ನವೀಕರಣ ಅಜರ್ಿ ಪರಿಗಣಿಸುವಂತೆ ಆದೇಶ ನೀಡಿತ್ತು. 2023 ರ ಜುಲೈ 5 ರಂದು ಬಿಬಿಎಂಪಿ ಮತ್ತೆ ಭೂ ಮಾಲೀಕರಿಂದ ಎನ್ಒಸಿ ತರಬೇಕೆಂದು ಸೂಚಿಸಿತ್ತು. ಆಗ ಅಜರ್ಿದಾರರು ಭೂ ಮಾಲೀಕರಿಂದ ಎನ್ಒಸಿ ಅಗತ್ಯವಿಲ್ಲ, ಜೊತೆಗೆ ಭೂ ಮಾಲೀಕರ ಜೊತೆಗಿನ ವ್ಯಾಜ್ಯ ಬಾಕಿ ಇದೆ ಎಂದು ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದರು.
ಹೋಟೆಲ್ ಅನ್ನು ಮುಚ್ಚುವ ಬಿಬಿಎಂಪಿ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ಭೂ ಮಾಲೀಕರಿಗೆ ಎನ್ಒಸಿ ಪಡೆಯುವಂತೆ ಒತ್ತಾಯಿಸದೆ, ವ್ಯಾಪಾರ ಪರವಾನಗಿಯನ್ನು ನವೀಕರಣ ಮಾಡಿಕೊಡುವಂತೆ ಆದೇಶ ನೀಡಿದೆ. ಈ ಹಿನ್ನೆಲೆ ಬಿಬಿಎಂಪಿ ಕಾಯ್ದೆಯ 2020ರ ಸೆಕ್ಷನ್ 305 ಅಡಿ ಪರವಾನಗಿ ನೀಡಲಾಗಿದೆ. ಆದರೆ, ಆ ನವೀಕರಣ ಕುರಿತ ಪ್ರಕ್ರಿಯೆಗಳನ್ನು ನಿಯಮಗಳಲ್ಲಿ ಉಲ್ಲೇಖಿಸಬೇಕಿತ್ತು. ಆದರೆ, ಬಿಬಿಎಂಪಿ ಯಾವುದೇ ನಿಯಮಗಳನ್ನು ರೂಪಿಸಿಲ್ಲದಿರುವುದರಿಂದ ಸಂವಿಧಾನದ ಕಲಂ 19 (1) (ಜಿ) ಪ್ರಕಾರ ಮೂಲ ಹಕ್ಕುಗಳಿಗೆ ತಡೆಯೊಡ್ಡಲಾಗುವುದಿಲ್ಲ ಎಂದು ಹೇಳಿದೆ