ರಾಜಕೀಯ ಸುದ್ದಿ

ಪ್ರಧಾನಿ ಮೋದಿ ದಾಖಲೆ: ಶಾಸಕ ರಘು ಅವರಿಂದ ವಿಶೇಷ ಪೂಜೆ 

Share It

ಪ್ರಧಾನಿ ಮೋದಿ ದಾಖಲೆ: ಶಾಸಕ ರಘು ಅವರಿಂದ ವಿಶೇಷ ಪೂಜೆ 

ಬೆಂಗಳೂರು: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ದಾಖಲೆ ನಿರ್ಮಿಸಿದ ಅಂಗವಾಗಿ ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ರಘು ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ನ್ಯೂ ತಿಪ್ಪಸಂದ್ರ ರಸ್ತೆಯಲ್ಲಿರುವ ಗಣೇಶ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರ ಜತೆ ಸೇರಿ ಮೆರವಣಿಗೆಯಲ್ಲಿ ಭಾಗವಹಿಸಿದ ಅವರು ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದರು. ದಾಖಲೆ ಬರೆದಿರುವ ಮೋದಿ ಅವರು ದೇಶದ ಕಣ್ಮಣಿಯಾಗಿದ್ದು ಅವರಿಗೆ ಮತ್ತಷ್ಟು ಆಯಸ್ಸು ಮತ್ತು ಅಧಿಕಾರ ಸಿಗಲಿ ಎಂದು ಪ್ರಾರ್ಥಿಸಿದರು.

ದೇಶ ಮೋದಿ ಅವರ ಅವಧಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಿದ್ದು, ವಿಶ್ವಮಟ್ಟದಲ್ಲಿ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ದೇಶ ಅನೇಕ ರಾಜತಾಂತ್ರಿಕ ಯಶಸ್ಸು ಕಾಣುವಲ್ಲಿ ಮೋದಿ ಅವರ ವರ್ಚಸ್ಸು ಕಾರಣವಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅವರಿಗೆ ಭಗವಂತ ಮತ್ತಷ್ಟು ಆಯಸ್ಸು ನೀಡಲಿ ಎಂದು ಅವರು ಪ್ರಾರ್ಥಿಸಿದರು. 

ಈ ವೇಳೆ ಮಂಡಲ ಬಿಜೆಪಿ ಅಧ್ಯಕ್ಷ ರಾಜ ರೆಡ್ಡಿ ಸೇರಿದಂತೆ ಕ್ಷೇತ್ರದ ಪ್ರಮುಖ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. 


Share It

You cannot copy content of this page