ಕರ್ನೂಲು: ಮಂಡ್ಯ ಮೂಲದ ನಟಿ ಪವಿತ್ರಾ ಜಯರಾಂ ಅವರು ಇಂದು ಮುಂಜಾನೆ ಆಂಧ್ರಪ್ರದೇಶದ ಕರ್ನೂಲು ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಂಡ್ಯ ಜಿಲ್ಲೆಯ ಹನಕೆರೆ ಮೂಲದ ಪವಿತ್ರಾ ಜಯರಾಂ ರೋಬೊ ಫ್ಯಾಮಿಲಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಆನಂತರ ಜೋಕಾಲಿ, ನೀಲಿ, ರಾಧಾರಮಣ ಧಾರಾವಾಹಿಗಳಲ್ಲಿ ಪವಿತ್ರಾ ನಟಿಸಿ ಮಿಂಚಿದ್ದರು. ಅದರೆ ತೆಲುಗಿನ ತ್ರಿನಯನಿ ಧಾರಾವಾಹಿ ಪವಿತ್ರಾ ಜಯರಾಂಗೆ ಖ್ಯಾತಿ ತಂದುಕೊಟ್ಟಿತ್ತು