ಬೆಂಗಳೂರು: ಜನವಸತಿ ಪ್ರದೇಶದಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ, ಮಗುವೊಂದರ ಪ್ರಾಣ ತೆಗೆದು, ಅನೇಕರನ್ನು ಗಾಯಗೊಳಿಸಿರುವ ಘಟನೆ ಬೆಂಗಳೂರಿನ ಜೀವನ್ ಭಿಮಾ ನಗರದಲ್ಲಿ ನಡೆದಿದೆ.
ಜೀವನ್ ಬಿಮಾ ನಗರ ವ್ಯಾಪ್ತಿಯ ಮುರುಗೇಶ್ ಪಾಳ್ಯದಲ್ಲಿ ೧೧.೩೦ರ ಸುಮಾರಿಗೆ ಕಾರು ಚಾಲಕನೊಬ್ಬ ಅಡ್ಡಾದಿಡ್ಡಿ ಕಾರು ಚಲಾಯಿಸಿಕೊಂಡು, ಬಂದ. ಅನೇಕರು ಈ ಬಗ್ಗೆ ಆತನಿಗೆ ತಿಳಿ ಹೇಳಿದರೂ ಕೇಳಲಿಲ್ಲ. ಕೆಎ.೧೭ ಎನ್ ೯೪೮೭ ನಂಬರಿನ ಕಾರನ್ನು ಚಾಲಯಿಸಿಕೊಂಡು ಬಂದ ಚಾಲಕ ಸಿಕ್ಕಸಿಕ್ಕವರ ಮೇಲೆ ಹತ್ತಿಸಿದೆ. ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿದರು ಎನ್ನಲಾಗಿದೆ.
ಆದರೆ, ಅಲ್ಲಿಯೇ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಕಾರು ಹತ್ತಿದ್ದು, ಅದರಲ್ಲಿ ಐದು ವರ್ಷದ ಆರವ್ ಎಂಬ ಒಬ್ಬ ಬಾಲಕ ಸಾವನ್ನಪ್ಪಿದ್ದಾನೆ. ಇನ್ನೂ ಮರ‍್ನಾಲ್ಕು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ.
ಕಾರಿನ ಮೇಲೆ ಪೊಲೀಸ್ ಎಂದು ಪೋಸ್ಟರ್ ಕೂಡ ಹಾಕಲಾಗಿದ್ದು, ಅಪ್ರಾಪ್ತ ವಯಸ್ಸಿನ ಬಾಲಕ ಕಾರು ಚಲಾಯಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಕಾರು ನಿಯಂತ್ರಣಕ್ಕೆ ಸಿಗದೆ ಅಡ್ಡಾದಿಡ್ಡಿ ಕಾರು ಚಲಾಯಿಸಿ, ನಂತರ ಕಾರು ನಿಲ್ಲಿಸಿ, ಆತನನ್ನು ಇಂದಿರಾ ನಗರ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಇಂದಿರಾ ನಗರ ಸಂಚಾರ ಪೊಲೀಸ್ ಠಾಣೆಯ ಪೋಲೀಸರು ಆಗಮಿಸಿದ್ದು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರು, ಒಟ್ಟುಗೂಡಿದ್ದು, ಅಪ್ರಾಪ್ತ ಬಾಲಕ ವಾಹನ ಚಾಲನೆ ಮಾಡುತ್ತಿದ್ದು, ಪ್ರಭಾವಿಗಳ ವಾಹನವಿರಬಹುದು. ಹೀಗಾಗಿ, ಪೊಲೀಸರು ಅವರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಡಿಸಿದ್ದಾರೆ.