ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 99 ಸರ್ಕಾರಿ ಶಾಲೆಗಳ 1000ಕ್ಕೂ ಅಧಿಕ ಕಪ್ಪು ಬೋರ್ಡ್ ಗಳಿಗೆ ಹೊಸ ರೂಪ
ಬೆಂಗಳೂರು: ಶಾಲೆಗಳಲ್ಲಿನ ಕಪ್ಪು ಬೋರ್ಡ್ ಗಳಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಮತ್ತು ಕಾರ್ಗಿಲ್ ಬಿಸಿನೆಸ್ ಸರ್ವಿಸ್ (ಸಿಬಿಎಸ್) ಸಹಯೋಗದಲ್ಲಿ ಗುಂಜೂರಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ನಡೆದ ಮೆಗಾ ಸಮಾರಂಭದಲ್ಲಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ದಾಖಲಾಗಿದೆ.
ಕ್ಲೀನ್ ಸ್ಲೇಟ್ ಕಾರ್ನಿವಲ್ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ನಗರದ 99 ಸರಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳ ಕಪ್ಪು ಹಲಗೆಗಳನ್ನು ಸ್ವಚ್ಛಗೊಳಿಸಿ ಮತ್ತು ಪೇಂಟ್ ಮಾಡಿ ಹೊಸ ರೂಪ ನೀಡಲಾಯಿತು. ಸ್ವಯಂ ಸೇವಕರ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಗಿಲ್ ಸಂಸ್ಥೆಯ ಭಾರತೀಯ ಮತ್ತು ಜಾಗತಿಕ ನಾಯಕರು ಪಾಲ್ಗೊಂಡಿದ್ದರು.
ಸಿಬಿಎಸ್ ನ ಭಾರತ ವಿಭಾಗದ ಸೆಂಟರ್ ಮುಖ್ಯಸ್ಥೆ ಅಪರ್ಣಾ ರಾವ್, ಡೇಟಾ ಆಂಡ್ ಅನಾಲಿಟಿಕ್ಸ್ ಸಸ್ಟೇನೇಬಿಲಿಟಿ ಡಿಜಿಟಲ್ ಸೀನಿಯರ್ ಡೈರೆಕ್ಟರ್ ಮ್ಯಾಥ್ಯೂ ವುಡ್ ಹಾಗೂ ಅಕ್ಷಯ ಪಾತ್ರ ಫೌಂಡೇಶನ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಧರ್ ವೆಂಕಟ್ ಉಪಸ್ಥಿತರಿದ್ದರು.
1,000ಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂ ಸೇವಕರಾಗಿ ಉತ್ತಮ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಹಾಗೂ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದರು. ಸಮುದಾಯಗಳ ಭಾಗವಹಿಸುವಿಕೆಯ ಮೂಲಕ ಅರ್ಥಪೂರ್ಣ ಬದಲಾವಣೆಯನ್ನು ತರುವ ಫೌಂಡೇಶನ್ ನ ಬದ್ಧತೆಯನ್ನು ಈ ಕಾರ್ಯಕ್ರಮ ಒತ್ತಿ ಹೇಳಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ ಪಾತ್ರ ಫೌಂಡೇಶನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಧರ್ ವೆಂಕಟ್, “ಈ ಕಾರ್ಯಕ್ರಮವು ಕೇವಲ ದಾಖಲೆ ಸ್ಥಾಪಿಸುವ ಪ್ರಯತ್ನವಲ್ಲ. ಇದು ಶೈಕ್ಷಣಿಕ ಮೂಲ ಸೌಕರ್ಯವನ್ನು ಸುಧಾರಿಸಲು ಮತ್ತು ಭಾರತದಾದ್ಯಂತ ಮಕ್ಕಳಿಗೆ ಉಜ್ವಲ ಭವಿಷ್ಯ ಸೃಷ್ಟಿಸಲು ಸಮುದಾಯದ ಬದ್ಧತೆ ಎಂಬುದನ್ನು ತೋರಿಸುವ ಪ್ರಯತ್ನವಾಗಿತ್ತು.