ದೇವನಹಳ್ಳಿ: ಕುಂದಾಣ ಹೋಬಳಿಯ ಬೀರಸಂದ್ರ ಗ್ರಾಮದ ಚಪ್ಪರಕಲ್ಲಿನಲ್ಲಿ ಶುಕ್ರವಾರ ಸುರಿದ ಭಾರೀ ಗಾಳಿ ಮಳೆಗೆ ಫಸಲಿಕೆ ಬಂದಿದ್ದ ತರಕಾರಿ ಬೆಳೆಗಳು ನೆಲಕಚ್ಚಿದ್ದು ಸುಮಾರು ಮೂರು ಲಕ್ಷ ಸಾಲ ಮಾಡಿ ಬೆಳೆ ಬೆಳೆದಿದ್ದ ರೈತನ ಕೈ ಸೇರಬೇಕಿದ್ದ ನಾವಿ ತಳಿಯ ಹೀರೇಕಾಯಿ, ಪಡುವಳಕಾಯಿ, ಹಾಗಲಕಾಯಿ ಪಸಲು ನೆಲಕಚ್ಚಿದೆ.
ಬಳ್ಳಿಗಳ ಬೆಳವಣಿಗೆಗೆ ಹಾಕಿದ್ದ ಚಪ್ಪರ ಕುಸಿದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಇನ್ನೇನು ಫಸಲು ಕೈ ಸೇರಬೇಕು ಎನ್ನುವ ಸಮಯದಲ್ಲಿ ಗಾಳಿ ಮಳೆಗೆ ಹಿರೇಕಾಯಿ ಬೆಳೆ ಸೇರಿದಂತೆ ತರಕಾರಿ ಬೆಳೆಗಳ ಚಪ್ಪರ ನೆಲಕಚ್ಚಿದ್ದು ಸಾಲ ಮಾಡಿ ಬೆಳೆ ಬೆಳೆದಿದ್ದ ರೈತ ಅಶ್ವತಪ್ಪ ಕಂಗಾಲಾಗಿದ್ದಾರೆ.
ಕುಂದಾಣ ಹೋಬಳಿ ಬೀರಸಂದ್ರ ಗ್ರಾಮದ ಚಪ್ಪರ ಕಲ್ಲಿನಲ್ಲಿ ರೈತ ಅಶ್ವತಪ್ಪ ತಮ್ಮ ಜಮೀನಿನಲ್ಲಿ ನಾಲ್ಕು ಲಕ್ಷ ಖರ್ಚು ಮಾಡಿ ಹೀರೇಕಾಯಿ ಪಡವಳಕಾಯಿ ಹಾಗಲಕಾಯಿ ಬೆಳೆಗಳನ್ನು ಬೆಳೆದಿದ್ದರು ಬೆಳೆಯು ಚೆನ್ನಾಗಿ ಬಂದಿತ್ತು ಮುಂದಿನ 5 ತಿಂಗಳಲ್ಲಿ ಸುಮಾರು 8 ರಿಂದ 10 ಲಕ್ಷಕ್ಕೂ ಅಧಿಕ ಬೆಲೆಯ ಇಳುವರಿಯ ನಿರೀಕ್ಷೆಯನ್ನು ಹೊಂದಿದ್ದರು.
ಕೇವಲ ಒಂದು ಕೊಯ್ಲು ಬೆಳೆ ಕಟಾವು ಮಾಡಿಕೊಂಡಿದ್ದ ಅಶ್ವತಪ್ಪ ಅವರು ಶುಕ್ರವಾರ ಸುರಿದ ಭಾರೀ ಪ್ರಮಾಣದ ಗಾಳಿ ಮಳೆಗೆ ಸಿಲುಕಿ ಬೆಳೆಗಳ ಚಪ್ಪರ ಕುಸಿದು ನೆಲಕಚ್ಚಿದ್ದು ಸಂಪೂರ್ಣ ಬೆಳೆ ನಾಶವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.