ರಾಜಕೀಯ ಸುದ್ದಿ

ಮಹಾಪ್ರಭುಗಳಿಗೆ ಬೇಕಿರುವುದು ಹೊಗಳು”ಭಟ್ಟರು” ಮಾತ್ರ

Share It

ಹುಬ್ಬಳ್ಳಿ: ನಮ್ಮನ್ನಾಳುತ್ತಿರುವ ಮಹಾಪ್ರಭುಗಳಿಗೆ ಬೇಕಿರುವುದು ಜನಪ್ರತಿನಿಧಿಗಳಲ್ಲ, ಬದಲಾಗಿ ಅವರನ್ನು ಸದಾ ಹೊಗಳುತ್ತಲೇ ಇರುವ ಹೊಗಳುಭಟ್ಟರು ಎಂದು ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ‘ಸಂವಿಧಾನ ಸುರಕ್ಷಾ ಸಮಿತಿ ಮತ್ತು ಎದ್ದೇಳು ಕರ್ನಾಟಕ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾಪ್ರಭುಗಳು ಸುಳ್ಳು ಹೇಳುತ್ತಾ ಎಲ್ಲೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ನಾವು ಹೋಗಿ ನಿಜ ಹೇಳಬೇಕು. ೧೦ ವರ್ಷದಲ್ಲಿ ಏನು ಕಿಸಿದೆಯಾಪ್ಪ ಎಂಬುವುದು ನಾವು ಕೇಳಬೇಕು. ೧೦ ವರ್ಷಗಳ ಆಳ್ವಿಕೆ ನಂತರ ನಾವು, ಆಳುವ ಸರ್ಕಾರವನ್ನೇ ಪ್ರಶ್ನೆ ಮಾಡಬೇಕು. ಬೇರೆಯವರನ್ನು ಯಾಕೆ ಪ್ರಶ್ನಿಸಿಬೇಕು. ಅವರು (ಹಿಂದೆ ಆಡಳಿತ ಮಾಡಿದವರು) ಸರಿಯಿಲ್ಲ ಎಂದು ತಾನೇ ಅವರನ್ನು ಕೆಳಗಿಳಿಸಿದ್ದು” ಎಂದು ಹೇಳಿದರು.

ಚುನಾವಣೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಸುವವರು, ಒಂದು ಪ್ರಣಾಳಿಕೆ ಬಿಡುಗಡೆ ಮಾಡಿ, ೧೦ ವರ್ಷದಲ್ಲಿ ನಾನು ಇದನ್ನೆಲ್ಲ ಸಾಧಿಸಿದ್ದೇನೆ. ಮುಂದೆ ಇಂತಹದೆನ್ನಲ್ಲ ಸಾಧಿಸುತ್ತೇನೆ ಎಂದು ಹೇಳಬೇಕು. ಇದನ್ನು ಹೊರತು, ಪ್ರತಿಪಕ್ಷದ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆ ಅಂತಾ ಹೇಳುತ್ತಾರೆ. ತಲೆಯಲ್ಲಿ ಅಂತಹ ದುರಹಂಕಾರ, ಕೋಮುದ್ವೇಷ ತುಂಬಿಕೊAಡಿರುವ ವ್ಯಕ್ತಿ ನಮ್ಮನ್ನಾಳಲು ಯೋಗ್ಯನೇ? ಮತದಾರ ತೀರ್ಪು ಕೊಡುವ ಮೊದಲೇ ತಮಗೆ ತಾವೇ ತಮಗೆ ೪೦೦ ಸೀಟ್ ಕೊಟ್ಟುಕೊಂಡು ಬಿಡುತ್ತಾರೆ. ಅಬ್ ಕಿ ಬಾರ್ ೪೦೦ ಪಾರ್ ಅಂತಾ ಹೇಳಿಕೊಳ್ಳುತ್ತಾರೆ. ೪೦೦ ಪಾರ್ ಏನೂ ಆಗಲ್ಲ. ತಮಿಳುನಾಡಿನಲ್ಲಿ ಎರಡು ಶೂನ್ಯ, ಕೇರಳದಲ್ಲಿ ಎರಡು ಶೂನ್ಯ ಬರುತ್ತದೆ. ನಾಲ್ಕು ಶೂನ್ಯಗಳನ್ನಿಟ್ಟುಕೊಂಡು ಓಡಾಡಿ” ಎಂದರು.

ನಿಮ್ಮ ಪಕ್ಷಕ್ಕೆ ಕಳ್ಳರು, ದರೋಡೆಕೋರರನ್ನು ಏಕೆ ಸೇರಿಸಿಕೊಂಡಿದ್ದೀರಾ?, ಭ್ರಷ್ಟಾಚಾರ ತೆಗೆಯುತ್ತೇನೆ, ಭ್ರಷ್ಟರನ್ನು ಜೈಲಿಗೆ ಹಾಕುತ್ತೇನೆ ಎಂದು ಹೇಳಿದೆ. ಆದರೆ, ಬಿಜೆಪಿಗೆ ಯಾಕೆ ಸೇರಿಕೊಳ್ಳುತ್ತಿದೀಯಾ. ನಿನ್ನ ಪಕ್ಷವೇನಾದರೂ ಜೈಲೇ” ಎಂದು ಲೇವಡಿ ಮಾಡಿದ ಅವರು, ”ನಾರಿ ಶಕ್ತಿ, ಬೇಟಿ ಪಡಾವೋ, ಬೇಟಿ ಬಚಾವೋ ಅಂತೀರಿ. ಒಲಿಂಪಿಕ್ ಪದಕ ಗೆದ್ದ ಬಂದ ಹೆಣ್ಣು ಮಕ್ಕಳಿಂದ ಸೆಲ್ಪಿ ತೆಗೆದುಕೊಳ್ಳಲು ಆಗುತ್ತದೆ. ಆದರೆ, ಅದೇ ಹೆಣ್ಣು ಮಕ್ಕಳು ನಿಮ್ಮ ಎಂಪಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ರಸ್ತೆಗೆ ಬಂದರೆ, ಮಾತನಾಡಿಸಿಕೋ ಆಗಲ್ವಾ ನಿನಗೆ? ಎಂದು ಟೀಕಿಸಿದರು.


Share It

You cannot copy content of this page