ರಾಜಕೀಯ ಸುದ್ದಿ

4 ದಿನ 15 ಜಿಲ್ಲೆಗಳಲ್ಲಿ ಬಿಸಿಲಿನ ಕಿಡಿ…!

Share It

ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಪ್ರಕಾರ ಗುರುವಾರದಿಂದ (ಮೇ 2 ರಿಂದ) 5 ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿ ಗಾಳಿ ಎಚ್ಚರಿಕೆ ನೀಡಿದೆ‌. ಮೇ 2 ಗುರುವಾರದಿಂದ 5 ದಿನಗಳ ಕಾಲ ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಜನರು ಮನೆಯ ಹೊರಗೆ ಹೋಗಿ ಬಿಸಿಲಿನಲ್ಲಿ ಸುತ್ತಾಡಬಾರದೆಂದು ಸಹ ಹವಾಮಾನ ಇಲಾಖೆ ಎಚ್ಚರಿಸಿದೆ.

ಈ ಮೂಲಕ ಹವಾಮಾನ ಇಲಾಖೆಯು ಇಡೀ ಕರ್ನಾಟಕಕ್ಕೆ ಮೇ 2 ರಿಂದ 5 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಿದೆ. ಈ 5 ದಿನಗಳಲ್ಲಿ ಜನರು ಸುಡುವ ಬಿಸಿಲಿನಲ್ಲಿ ಸುತ್ತಾಡಿದರೆ ಶಾಖ ಸಂಬಂಧಿಸಿದ ಅನಾರೋಗ್ಯದ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ‌‌‌. ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಈ 5 ದಿನಗಳ ಕಾಲ ಸಾರ್ವಜನಿಕರು ಹಗಲಿನ ಬಿಸಿಲಿನಲ್ಲಿ ವಿನಾಃಕಾರಣ ಸುತ್ತಾಡದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕದ ಮೈಸೂರು, ಮಂಡ್ಯ, ಕೋಲಾರ, ತುಮಕೂರು, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಕೊಪ್ಪಳ, ರಾಯಚೂರು, ಗದಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮೇ 2 ರಿಂದ 5 ದಿನಗಳ ಕಾಲ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ ಎಂದು ಐಎಂಡಿ ಬೆಂಗಳೂರು ಪ್ರಭಾರ ನಿರ್ದೇಶಕ ಎನ್.ಪುವಿಯರಸನ್ ತಿಳಿಸಿದ್ದಾರೆ.


Share It

You cannot copy content of this page