ರಾಜಕೀಯ ಸುದ್ದಿ

ಅಮಿತ್ ಶಾ- ನಿರಂಜನ್ ಹಿರೇಮಠ ಭೇಟಿ

Share It

ಮಗಳ ಹತ್ಯೆ ಪ್ರಕರಣದಲ್ಲಿ ನ್ಯಾಯ ಕೋರಿ ಕೇಂದ್ರ ಗೃಹ ಸಚಿವರಿಗೆ ನೇಹಾ ತಂದೆ ಮನವಿ ಸಲ್ಲಿಕೆ

ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹತ್ಯೆಗೀಡಾದ ನೇಹಾ ಪ್ರಕರಣದಲ್ಲಿ ನ್ಯಾಯ ಕೋರಿ ಕೇಂದ್ರ ಹೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಲಾಗಿದೆ.

ಹುಬ್ಬಳ್ಳಿಗೆ ಇಂದು ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರಕ್ಕೆಂದು ಬಂದಿದ್ದ ಅಮಿತ್ ಶಾ ಅವರನ್ನು ನೇಹಾ ತಂದೆ-ತಾಯಿ ನೇರವಾಗಿ ಭೇಟಿ ಮಾಡಿ ಮನವಿ ಪತ್ರ ಅರ್ಪಿಸಿದ್ದಾರೆ.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ವೇದಿಕೆ ಹಿಂಭಾಗದಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿರುವ ನೇಹಾ ಕುಟುಂಬ ಮಗಳ ಹತ್ಯೆ ಕುರಿತು ಸಂಪೂರ್ಣ ಮಾಹಿತಿ ಒದಗಿಸಿದರು.

ನೇಹಾ ತಂದೆ ನಿರಂಜನ್ ಹಿರೇಮಠ ಅವರು ತಾವೊಬ್ಬ ಕಾಂಗ್ರೆಸ್ ಕಾರ್ಪೊರೇಟರ್ ಆದಾಗ್ಯೂ ಮಗಳ ಹತ್ಯೆ ಪ್ರಕರಣದಲ್ಲಿ ಸರಿಯಾಗಿ ನ್ಯಾಯ ದಕ್ಕಿಸಿಕೊಳ್ಳಲು ಆಗುತ್ತಿಲ್ಲವೆಂದು ಅಮಿತ್ ಶಾ ಅವರೆದುರು ದುಃಖ ತೋಡಿಕೊಂಡಿದ್ದಾರೆ.

ಮಗಳು ನೇಹಾಳ ಹತ್ಯೆ ಹಿನ್ನೆಲೆ ಮತ್ತು ಈವರೆಗೆ ಆದ ಬೆಳವಣಿಗೆಗಳ ಕುರಿತು ಕಾರ್ಪೊರೇಟರ್ ನಿರಂಜನ್ ಅವರು ಕೇಂದ್ರ ಗೃಹ ಸಚಿವರೆದುರು ವಿವರಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೇಹಾ ತಂದೆ-ತಾಯಿಗೆ ಸಾಂತ್ವನ ಹೇಳಿದರಲ್ಲದೆ, ನಾವಿದ್ದೇವೆ ಹೆದರಬೇಡಿ ಎಂದು ಆತ್ಮಸ್ಥೈರ್ಯ ತುಂಬಿದರು.

ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಮತ್ತಿತರ ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.


Share It

You cannot copy content of this page